ಲೇಖಕ ಶ್ರೀರಾಮ ಇಟ್ಟಣ್ಣವರ ಅವರ ʼನೂರು ಶೀಶುಗೀತೆಗಳುʼ ಪುಸ್ತಕ ಮೌಲಿಕವಾಗಿ ರಚಿಸಿದ ಶಿಶು ಗೀತಾ ಸಾಹಿತ್ಯವಾಗಿದೆ. ಈ ಕೃತಿ ಓದುತ್ತಾ ಹೋದಂತೆ ಅವುಗಳ ಆಳದೆಡೆಗೆ ಮನಸ್ಸು ತಾನೇ ತಾನಾಗಿ ಇಳಿಯುತ್ತದೆ. ಶಿಶುಗೀತೆಗಳು ಶಾಲಾಪೂರ್ವ ತರಗತಿಯಲ್ಲಿರುವ ಮಕ್ಕಳ ವಯೋಮಾನಕ್ಕೆ ತಕ್ಕುದಾಗಿದೆ. ಈ ಗೀತೆಗಳಲ್ಲಿರುವ ಶಬ್ಧಲಾಲಿತ್ಯ, ಸರಳ ಶಬ್ಧಗಳ ಉಪಯೋಗ ಮಗುವಿನ ಆ ವಯಸ್ಸಿನ ಮಟ್ಟಕ್ಕೆ ಇಳಿಯುವ ಲೇಖಕರ ದಾರ್ಢ್ಯ ಮೆಚ್ಚುವಂತದು. ಮಕ್ಕಳ ಭವ್ಯ ಭವಿಷ್ಯವನ್ನು ಕವಿ ಕಂಡಿದ್ದಾನೆ. ಮಕ್ಕಳ ನರನಾಡಿಯಲ್ಲಿ ಗೀತೆಗಳನ್ನು ತುಂಬಲು ಉತ್ಸಾಹಿತನಾಗಿದ್ದಾನೆ, ಉದ್ಯುಕ್ತನಾಗಿದ್ದಾನೆ. ವಿಷಯ ಪ್ರಧಾನವಿಟ್ಟುಕೊಂಡು ತಯಾರಿಸಿ ಅನುಸರಿಸುವ ಇಂದಿನ ಪಾಠಕ್ರಮದಲ್ಲಿ ಈ ಪುಸ್ತಕವು ಪ್ರತಿ ಹೆಜ್ಜೆಯಲ್ಲಿ ಉಪಯೋಗ ಬೀಳುತ್ತದೆ. ಜನಪದ ಶಿಶು ಪ್ರಾಸಗಳನ್ನು ಬಿಟ್ಟರೆ, ಆಧುನಿಕ ಮಕ್ಕಳ ಸಾಹಿತ್ಯದಲ್ಲಿ ಚಿಕ್ಕಮಕ್ಕಳಿಗೆ ಸಂಬಂಧಪಟ್ಟ ಶಿಶು ಪ್ರಾಸ ರಚನೆ ಅಷ್ಟಾಗಿ ಕಾಣಬರುವುದಿಲ್ಲ. ಅಂಥ ಕೊರತೆಯನ್ನು ತುಂಬಿಕೊಡುವ ಒಂದು ಪ್ರಯತ್ನದ ಹಿನ್ನೆಲೆಯಲ್ಲಿ ಈ ಕವನ ಸಂಕಲನ ಬಂದಿದೆ.
©2024 Book Brahma Private Limited.