‘ಅಮ್ಮ ನಂಗೆ ಇಷ್ಟ ಕಣೆ’ ಲೇಖಕ ಜೀನಹಳ್ಳಿ ಸಿದ್ಧಲಿಂಗಪ್ಪ ಅವರು ರಚಿಸಿರುವ ಮಕ್ಕಳ ಕವನ ಸಂಕಲನ. ಈ ಹಿಂದೆ ಪುಟ್ಟ ಪುಟಾಣಿಗಳ ಹಾಡು, ಕುಣಿದಾಡು ಬಾ ನವಿಲೆ, ಹೇಳು ಪುಟ್ಟ ಹೇಳು, ಚಿಣ್ಣರ ಹಾಡು, ಹಾಡು ನನ್ನ ಹಾಡು ಮುಂತಾದ ಸಂಕಲನಗಳ ಮೂಲಕ ಇವರು ಮಕ್ಕಳ ಸಾಹಿತ್ಯ ರಚನೆಯಲ್ಲಿ ಛಾಪು ಮೂಡಿಸಿದ್ದು, ವಸುದೇವ ಭೂಪಾಲಂ ದತ್ತಿ, ಪ್ರಶಸ್ತಿ ಪಡೆದ ‘ಹಾಡು ನನ್ನ ಹಾಡು’, ಕನ್ನಡ ಪುಸ್ತಕ ಸೊಗಸು ಪ್ರಶಸ್ತಿ ಪಡೆದ ‘ಚಿಣ್ಣರ ಚಿಲಿಪಿಲಿಗಾನ’ ಮತ್ತು ಗೋರೂರು ಸಾಹಿತ್ಯ ಪ್ರಶಸ್ತಿ ಪುರಸ್ಕೃತ ‘ಹೇಳು ಹೇಳು ನಾನು ಯಾರು’-ಇವು ಮಕ್ಕಳ ಸಾಹಿತ್ಯ ಪ್ರಕಟಣೆಯ ಚೆಂದ ಎರಡು ದೃಷ್ಟಿಯಿಂದಲೂ ಗಮನಾರ್ಹ ಕೃತಿಗಳು ಎನಿಸಿಕೊಂಡಿದ್ದವು. ಇಂತಹ ಜೀನಹಳ್ಳಿಯವರು ಜಾನಪದ ಮತ್ತು ಇತರ ಸಾಹಿತ್ಯ ಕೃತಿಗಳ ಭರಾಟೆಯಲ್ಲಿ ಮಕ್ಕಳ ಸಾಹಿತ್ಯದಿಂದ ದೂರ ಸರಿದರೇನೋ ಎಂಬ ಆತಂಕ ಕಾಡುತ್ತಿತ್ತು. ಮಕ್ಕಳ ಮನೋಲೋಕವನ್ನು ಪ್ರವೇಶಿಸಿ ತಮ್ಮ ಅಭಿವ್ಯಕ್ತಿಯ ಮೂಲ ಚೈತನ್ಯವನ್ನು ಜೀನಹಳ್ಳಿ ದಾಖಲಿಸಿದ್ದಾರೆ ಎನ್ನುತ್ತಾರೆ, ಕೃತಿಗೆ ಬೆನ್ನುಡಿ ಬರೆದ ಪ್ರೊ. ಮೊರಬದ ಮಲ್ಲಿಕಾರ್ಜುನ.
©2025 Book Brahma Private Limited.