‘ಚಿಣ್ಣರ ಹಾಡು’ ಹಿರಿಯ ಲೇಖಕ ಜೀನಹಳ್ಳಿ ಸಿದ್ಧಲಿಂಗಪ್ಪ ಅವರು ರಚಿಸಿರುವ ಮಕ್ಕಳ ಹಾಡುಗಳ ಸಂಕಲನ. ಹಳ್ಳಿಯ ಮಕ್ಕಳ ಅಕ್ಷರದ ಹಸಿವನ್ನು ಚಿತ್ರಿಸುವ ಹೃದಯಸ್ಪರ್ಶಿಯಾದ ಅನೇಕ ಹಾಡುಗಳಿವೆ. ಹೆಣ್ಣುಮಕ್ಕಳು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿರುವ ನೋವು ಕವಿಯನ್ನು ಗಾಢವಾಗಿ ಕಾಡಿದೆ. ಈ ರಚನೆಗಳನ್ನು ಓದುವಾಗ ಕಣ್ಣಂಚು ಕೊಂಚ ಒದ್ದೆಯಾಗುತ್ತದೆ. ಸಿದ್ಧಲಿಂಗಪ್ಪನವರು ಹಳ್ಳಿಯ ಭಾಷೆಯನ್ನು ಮಕ್ಕಳ ಸಾಹಿತ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸಿರುವುದು ಕೂಡಾ ವಿಶೇಷ ಉಲ್ಲೇಖಕ್ಕೆ ಅರ್ಹವಾದುದು. ಅದರಲ್ಲಿ ಅವರು ಪೂರ್ಣ ಪ್ರಮಾಣದಲ್ಲಿ ಮುಂದಿನ ದಿನಗಳಲ್ಲಿ ಯಶಸ್ಸು ಪಡೆಯಲಿ ಎಂದು ಕೃತಿಗೆ ಬೆನ್ನುಡಿ ಬರೆದ ಹಿರಿಯ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ.
©2024 Book Brahma Private Limited.