‘ಕಕಾಕಿಕೀ ಹಾಡು’ ಲೇಖಕ ಜೀನಹಳ್ಳಿ ಸಿದ್ಧಲಿಂಗಪ್ಪ ಅವರು ಮಕ್ಕಳಿಗಾಗಿ ರಚಿಸಿರುವ ಕವನ ಸಂಕಲನ. ಈ ಕೃತಿ ಎರಡು ಕಾರಣಗಳಿಗಾಗಿ ಗಮನಾರ್ಹವಾಗಿದೆ. ಒಂದು ' ಹೆಚ್ಚು ಕಡಿಮೆ ಕಣ್ಮರೆಯಾಗಿ ಬಿಡುತ್ತದೇನೋ ಎಂದು ಆತಂಕಗೊಳ್ಳುತ್ತಿರುವ ಕನ್ನಡ ಮಾಧ್ಯಮದ ಕಲಿಕೆಯ ಸೊಗಸನ್ನು ಶೀರ್ಷಿಕೆಯ ಪದ್ಯ ಸೊಗಸಾಗಿ ದಾಖಲಿಸಿದೆ. ಇನ್ನೊಂದು' ಮಕ್ಕಳ ಭಾವಪ್ರಪಂಚದ ಹಲವಾರು ಮಗ್ಗಲುಗಳನ್ನು ಇಲ್ಲಿನ ಕವನಗಳ ಮೂಲಕ ಸಿದ್ಧಲಿಂಗಪ್ಪ ತೆರೆದು ತೋರಿಸುವ ಪ್ರಯತ್ನ ಮಾಡಿದ್ದಾರೆ. ಜಾನಪದ ಮತ್ತು ಮಕ್ಕಳ ಸಾಹಿತ್ಯ ಪ್ರಕಟಣೆಯ ಮೂಲಕ ಈಗಾಗಲೇ ಓದುಗರ ಮೆಚ್ಚುಗೆ ಗಳಿಸಿರುವ ಜೀನಹಳ್ಳಿಯವರು ನೆಲಮೂಲದ ಬದುಕು ಮತ್ತು ಭಾವನೆಗಳನ್ನು ಮತ್ತು ಗಟ್ಟಿಗೊಳಿಸುವ ಪ್ರಯತ್ನವನ್ನು ಈ ಕೃತಿಯಲ್ಲಿಯೂ ಮುಂದುವರೆಸಿರುವುದನ್ನು ಕಾಣಬಹುದು.
©2025 Book Brahma Private Limited.