ಯಾರಿಗೂ ಇದನ ಹೇಳಬಾರದು.-ಮಕ್ಕಳ ಕವಿತೆಗಳಿರುವ ಈ ಸಂಕಲನವನ್ನು ಲೇಖಕ ಚಂದ್ರಗೌಡ ಕುಲಕರ್ಣಿ ಅವರು ರಚಿಸಿದ್ದಾರೆ. ಮಕ್ಕಳ ಕಲ್ಪನೆಯ ಲಹರಿಗಳು ಹೊಸ ಲೋಕವನ್ನು ತೆರೆದಿಡುತ್ತವೆ..ಒಟ್ಟು 40 ಕವಿತೆಗಳಿವೆ..ವಿಷಯ ವಸ್ತುವಿನಿಂದ, ಆಡು ಭಾಷೆಯ ಸೊಗಸಿನಿಂದ, ಅದ್ಭುತ ಕಲ್ಪನೆ, ಕನಸುಗಳಿಂದ, ಲಯಬದ್ಧ ವಿನ್ಯಾಸದಿಂದ, ಗುಂಯ್ ಗುಡುವ ನಾದದಿಂದ...ಮಕ್ಕಳಿಗೆ ಮುದ ನೀಡುತ್ತವೆ. ಅವರೊಳಗಿನ ಲವಲವಿಕೆ, ಕುತೂಹಲಗಳನ್ನು ಇಮ್ಮಡಿಗೊಳಿಸುವ ಶಬ್ದಚಿತ್ರಗಳಿವೆ. ಬಣ್ಣ ಬಣ್ಣದ ಬಲೂನ ಬೇಡವೆ ಬೇಡ ಎನ್ನುವ ತುಂಟನೊಬ್ಬ ಹುಣ್ಣಿಮೆ ಚಂದ್ರನಿಗೆ ದಾರ ಕಟ್ಟಿಕೊಡು ಎಂದು ವಿಲಕ್ಷಣ ಬೇಡಿಕೆಯಿಟ್ಟು ಅಮ್ಮನನ್ನು ಚಕಿತಗೊಳಿಸುತ್ತಾನೆ.
ಗಣಕಯಂತ್ರ, ಮೊಬೈಲ್ ಗಳ ಪರಿಣಾಮ ಕುರಿತು ಕುತೂಹಲಕರ ನೋಟಗಳಿವೆ..ಹಾರೊ ತಟ್ಟೆ ಹುಡುಗರು ಶಾಲೆಗೆ ಬಂದ ವಿಸ್ಮಯಗಳೂ ಇಲ್ಲಿವೆ..ಬೆಕ್ಕು- ನೆಗಡಿ, ಡೈಪರ್ ಗೋಳು, ಜೇಡ, ಗಾಂಧಿ, ಕಲಾಂ...ಅಜ್ಜ ಮೊಮ್ಮಗ, ಬಸ್ಸಿನ ಗೋಳು, ಶಬ್ದಕೋಶ...ಹೀಗೆ ಮಗು ಪರಿಸರದ ಜ್ಞಾನವನ್ನು ವಿಸ್ತರಿಸುವ ಅನನ್ಯ ಕವಿತೆಗಳಿವೆ.ಕೃತಿಗೆ ಮುನ್ನುಡಿ ಬರೆದ ಮಕ್ಕಳ ಸಾಹಿತಿ ಡಾ.ಆನಂದ ಪಾಟೀಲರು ‘ನಿಗದಿತ ಲಯದಲ್ಲಿ ನಿರೂಪಿತವಾದ ರಚನೆಗಳು ಇಲ್ಲಿವೆ. ಸರಳವಾಗಿ ಹರಿಯುವ, ಭಾಷೆಯ ಹದವರಿತ ಭಾಷೆಯ ಬಳಕೆಯನ್ನು ಇಲ್ಲಿ ಕಾಣುತ್ತೇವೆ. ಹಾಡಿನಂತೆ ಸಾಗುವ ಲಯದ ನಡುವೆ ಮಾತುಕತೆಯ ಲಯವೂ ಕಾಣಿಸಿಕೊಂಡಿದೆ. ಎಷ್ಟ ಬರದ್ರು ನೋಟಬುಕ್ ಹಾಳಿ ಎಂದೂ ಮುಗದ ಹೋಗಬಾರದು ! ತಿದ್ದಿ ತೀಡಿ ಹೆಂಗೆ ಬರದ್ರು ಪೆನ್ಸಿಲ್ ಮಾತ್ರ ಸವಿಬಾರದು ! ಅನ್ನೋ ಮೋಜಿನ ಕವಿತೆಯಲ್ಲಿ ಈ ಬಗೆಯ ಮಾತು ಕೇಳಲು ಸಿಗುತ್ತವೆ. ಹುಡುಗ ತಪಸ್ಸಿಗಿಳಿದಿದ್ದಾನೆ- ತನ್ನ ನಿತ್ಯ ಗೋಳಿಗಾಗಿ….ಚೀಲ ಭಾರ ಆಗಬಾರದು, ಬರಹ ಚಿತ್ ಕಾಟ ಆಗಬಾರದು, ಪರೀಕ್ಷೆಯಲ್ಲ ಅಂಕ ಕಡಿಮೆ ಬೀಳಬಾರದು…!!! ಪ್ರಸ್ತುತ ಕವಿತೆಯಲ್ಲಿ ಹುಡುಗ, " ಅಪ್ಪ ಅಮ್ಮ ಮಾಸ್ತರ ಇರಲಿ ಯಾರಿಗೂ ಇದನ ಹೇಳಬಾರದು " ಎಂದು ಗಣಪನಲ್ಲಿ ಬೇಡಿಕೊಳ್ಳುವುದು ಪರಿಣಾಮಕಾರಿಯಾಗಿದೆ.' ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.