ಕವಿ ಬಾಗೂರು ಮಾರ್ಕಾಂಡೇಯ ಅವರು ಮಕ್ಕಳಿಗಾಗಿ ರಚಿಸಿದ ಕವನಗಳ ಸಮಕಲನ- ನಂದನ ನನ್ನ ಶಾಲೆ. ಓದಿ ಬರೆಯುವ, ಆಟ ಆಡುತ ನಲಿಯುವ, ಗುರುಗಳು ಹೇಳಿದುದನ್ನು ಚಾಚೂ ತಪ್ಪದೇ ಮಾಡುವ, ಶಿಸ್ತಾಗಿ ವರ್ತಿಸುವ ಮಕ್ಕಳ ಮನದ ಆಶಯದಂತೆ ,ಅವುಗಳಲ್ಲಿಯ ಮಧುರ ಭಾವಗಳನ್ನು ಕವಿತೆಗಟ್ಟುವ ಪ್ರಯತ್ನವನ್ನು ಈ ಸಂಕಲನದಲ್ಲಿ ಕಾಣಬಹುದು. ಹಲವು ಕವಿತೆಗಳು ಗೀತೆಗಳಾಗಿವೆ. ಸುಲಭವಾಗಿ ಹಾಡಿ ನಲಿಯಬಹುದಾದ ಕವಿತೆಗಳಿವೆ. ಪ್ರತಿ ಕವಿತೆಗೂ ಆಕರ್ಷಕವಾದ ಚಿತ್ರವಿನ್ಯಾಸವನ್ನು ಮಾಡಲಾಗಿದೆ.
©2025 Book Brahma Private Limited.