‘ಋತು ಗೀತಗಳು’ ಲೇಖಕ ಆರ್.ವಿ. ಭಂಡಾರಿ ಅವರು ಮಕ್ಕಳಿಗಾಗಿ ಬರೆದ ಪದ್ಯ-ಪ್ರಾಸಗಳು. ಈ ಕೃತಿಗೆ ಬಿ.ಎ. ಸನದಿ ಅವರ ನಲ್ನುಡಿ ಬರಹವಿದೆ. ಪುಸ್ತಕದ ಬಗ್ಗೆ ಬರೆಯುತ್ತಾ ಆರ್.ವಿ. ಭಂಡಾರಿಯವರು ಶಿಕ್ಷಣ ರಂಗದಲ್ಲೇ ತಮ್ಮ ಜೀವಮಾನ ಕಳೆದವರು. ಕಿರಿಯರೊಡನೆ ಕಿರಿಯರಾಗಿ ಆಡಿ, ಹಿರಿಯರೊಡನೆ ಹಿರಿಯರಾಗಿ ಕೂಡಿ ಬೆಳೆದವರು. ವಿವಿಧ ವಯೋಮಾನದ ವಿವಿಧ ಅನುಭವಗಳನ್ನು ಸಮಭಾವದಿಂದ ಅಂಗೀಕರಿಸಿಕೊಂಡು ಹೊಸತೊಂದು ರಸ ಲೋಕ ಸೃಷ್ಟಿಗೆ ತಮ್ಮ ಲೇಖನಿಯ ಮೂಲಕ ಪ್ರೇರಣೆ ನೀಡುವ ಶಬ್ದಕೌಶಲ್ಯ ಅವರಿಗೆ ಸಾಧಿಸಿತು. ಇದಕ್ಕೆ ಸಾಕ್ಷಿ ಎಂಬಂತೆ ಋತು ಗೀತಗಳು ಸಂಕಲನದಲ್ಲಿಯ ಆರಂಭದ ಪದ್ಯಗಳಲ್ಲಿಯ ಭಾಷೆಯ ಬಳಕೆಯನ್ನು ಗಮನಿಸಬಹುದು ಉದಾ: ಬೆಳಗಾಯಿತು- ಚುಂ ಚುಂ ಹಾಡಿನ ಹಕ್ಕಿ-ಚಿಲ್ ಚಿಲ್ ದೋಸೆಯ ಸದ್ದು-ಚೊಂಯ್ ಚೊಂಯ್ ಮೂಗಿಗೆ ಬಡೆಯಿತು- ಘಂ ಘಂ ಫ್ಲೇಟಿನ ಸದ್ದು- ಟಣ್ ಟಣ್ (ಬೆಳಗು) ಈ ಪ್ಲೇಟಿನ ಸದ್ದು ಕೇಳಿದಾಕ್ಷಣ ತಲೆನೋವೆನ್ನುತ ಮಲಗಿದ್ದ ಸಿದ್ಧ ಗುಣವಾಯಿತೆನ್ನುತ ಎದ್ದನೆಂದು ಮುಗಿಯುವ ಈ ಪ್ರಾಸ-ಪದ್ಯ ಪ್ರತಿಸಾಲಿಗೊಮ್ಮೆ ತನ್ನ ಶಬ್ದಗಳ ಪುನರುಕ್ತಿಯಿಂದ ಮಕ್ಕಳ ಮನಕ್ಕೆ ಮುದ ನೀಡುವುದು ಮಾತ್ರವಲ್ಲದೆ, ಪ್ರಾಕೃತಿಕ ಚಟುವಟಿಕೆಯೊಂಡರೊಡನೆ ಪಾರಿವಾರಿಕ ಚಟುವಟಿಕೆಯನ್ನೂ ಮೇಳವಿಸಿ ಕೊನೆಗೆ ಕೆಲವು ಮಕ್ಕಳ ತಿಂಡಿ ಬಾಕತನದ ಮೇಲೆ ಬೆಳಕನ್ನೂ ಬೀರುತ್ತದೆ ಎಂದಿದ್ದಾರೆ ಬಿ.ಎ. ಸನದಿ.
©2024 Book Brahma Private Limited.