ಕವಿ ಬಾಗೂರು ಮಾರ್ಕಾಂಡೇಯ ಅವರು ಮಕ್ಕಳಿಗಾಗಿ ಬರೆದ ಕವನಗಳ ಸಂಕಲನವಿದು-ಬಾರೋ ಬಾರೋ ಗಿಳಿಯೆ. ಅನೇಕ ಕವಿತೆಗಳು ಮಕ್ಕಳ ಮನಸ್ಸಿನ ಮಧುರ ಭಾವಗಳನ್ನು ಅನುರಣಿಸುವಂತಿವೆ. ಮಕ್ಕಳಿಗೆ ಚಿಟ್ಟೆಗಳೆಂದರೆ ಬಲು ಇಷ್ಟ.‘.. ಬಣ್ಣದ ಚಿಟ್ಟೆಯು ಹಾರುತ ಬಂತು ಬಣ್ಣ ಬಣ್ಣದ ಹೂವಿನ ಬಳಿಗೆ ನಾನೇ ಬೆಳೆಸಿದ ಗಿಡದೆಡೆಗೆ....’ ಎಂದು ಹಿರಿಹಿರಿ ಹಿಗ್ಗುವ ಮಕ್ಕಳ ಸಂಭ್ರಮವನ್ನು ಈ ಕವಿತೆಗಳು ಪ್ರತಿಧನಿಸುತ್ತವೆ. ಮತ್ತೊಂದು ಕವಿತೆಯಲ್ಲಿ ‘ತಪ ತಪ ನಡೆಯುವ ಬಾಲೆ ವಾಯಕ್ ವಾಯಕ್ ಏನಿದು ಘನತೆ ಬೆಳಗೂ ಬೈಗೂ ನೀರಲಿ ಮುಳುಗು ಗುಳುಗುಳು ಗುಳ್ಳೆಯ ಆಟ ಆ ಕೆಸರಲಿ ಏನಿದೆ ಊಟ....’ ಎನ್ನುವ ಕುತೂಹಲವೂ ಇಲ್ಲಿ ಅಡಗಿದೆ. ಇಂಥ ಅನೇಕ ಕವಿತೆಗಳು ಮಕ್ಕಳನ್ನು ರಂಜಿಸುತ್ತವೆ, ಅವರ ಕುತೂಹಲವನ್ನು ಕೆರಳಿಸುತ್ತವೆ.
©2024 Book Brahma Private Limited.