ಪಾಪು ಪದ್ಯಗಳು ಮತ್ತು ಒಬಿರಾಯನ ಕಥೆಗಳು

Author : ಎನ್‌. ಶ್ರೀನಿವಾಸ ಉಡುಪ

Pages 126

₹ 150.00




Year of Publication: 2022
Published by: ವಸಂತ ಪ್ರಕಾಶನ
Address: 10ನೇ ಬಿ ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್ ಹತ್ತಿರ, 3ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ - 560011
Phone: 7892106719

Synopsys

ಪಾಪು ಪದ್ಯಗಳು ಮತ್ತು ಒಬಿರಾಯನ ಕಥೆಗಳು ಶ್ರೀನಿವಾಸ ಉಡುಪ ಅವರ ಕಥೆಯಾಗಿದೆ. ಪಾಪು ಪದ್ಯಗಳು ನಮ್ಮ ಪ್ರಸಿದ್ಧ ಮಕ್ಕಳ ಕವಿ ಶ್ರೀನಿವಾಸ ಉಡುಪರ ಮರಣೋತ್ತರ ಪ್ರಕಟಣೆ. ಉಡುಪರು ಮಕ್ಕಳ ಮನೋಲೋಕವನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವ, ಮಕ್ಕಳ ಅಗತ್ಯಗಳನ್ನು ಸೊಗಸಾಗಿ ಪೂರೈಸಬಲ್ಲ ಸಮರ್ಥ ಮಕ್ಕಳ ಸಾಹಿತಿ, ಇವರ ಪದ್ಯಗಳಲ್ಲಿ ಕಾಣುವ ಕಲ್ಪಕತೆ, ಸಹಜ ಪ್ರಾಸ, ನವಿರು ತಮಾಷೆ, ಭಾಷಾ ಸೂಕ್ಷ್ಮತೆ ಅಪರೂಪದವು. ಕುಂಭಕರ್ಣನ ನಿದ್ದೆಯಂಥ ಕ್ಲಾಸಿಕ್ ಮಕ್ಕಳ ಕವಿತೆಯನ್ನು ಕನ್ನಡಕ್ಕೆ ಕೊಟ್ಟವರು ಇವರು. ಕವಿತೆಗಳೊಂದಿಗೆ ಓಬಿರಾಯನ ಕಥೆ ಎಂಬ ಉಡುಪರ ಅಪ್ರಕಟಿತ ನಾಟಕ ಈ ಸಂಗ್ರಹದ ಒಂದು ಬೋನಸ್ ಕೊಡುಗೆ ಆಗಿದೆ ಎಂದು ಡಾ. ಎಚ್‌. ಎಸ್‌ ವೆಂಕಟೇಶ ಮೂರ್ತಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಎನ್‌. ಶ್ರೀನಿವಾಸ ಉಡುಪ

ತಮ್ಮ ಅನನ್ಯ ಮಕ್ಕಳ ಸಾಹಿತ್ಯ ರಚನೆಯ ಮೂಲಕ ಮಕ್ಕಳ ಮನಸ್ಸನ್ನು ಗೆದ್ದವರು ಎನ್‌. ಶ್ರೀನಿವಾಸ ಉಡುಪ. ಅವರು 1935 ಆಗಸ್ಟ್‌ 15ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಜನಿಸಿದರು. ತಂದೆ ಎನ್‌. ವೆಂಕಟೇಶ ಉಡುಪ, ತಾಯಿ ಮಹಾಲಕ್ಷ್ಮಿ. ತಮ್ಮ ವಿದ್ಯಾಭ್ಯಾಸದ ನಂತರ ತುಂಗಾ ಕಾಲೇಜಿನಲ್ಲಿ ದೀರ್ಘ ಕಾಲ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ತೀರ್ಥಹಳ್ಳಿಯ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅಲಂಕರಿಸಿದ್ದರು. ‘ಪಾಪು ಪದ್ಯಗಳು, ಕನ್ನಡ ನಾಡಿನ ಕೂಸುಮರಿ, ಕುಂಭಕರ್ಣನ ನಿದ್ದೆ’ ಅವರ ಮಕ್ಕಳ ಕವನ ಸಂಕಲನಗಳಾಗಿದ್ದು ‘ಹಿಡಿಂಬನ ತೋಟ, ಬೆರಳುಗಳು’ ಹೀಗೆ ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ. ‘ಗೂಬಜ್ಜಿಯ ...

READ MORE

Related Books