‘ನಂದನವನ’ ಲೇಖಕಿ ಜಿ.ಆರ್. ಪರಿಮಳಾ ರಾವ್ ಅವರು ಮಕ್ಕಳಿಗಾಗಿ ಬರೆದ ಕವಿತೆಗಳ ಸಂಕಲನ. ಕೃತಿಯ ಕುರಿತು ಬರೆಯುತ್ತಾ ‘ಮಕ್ಕಳಿಗಾಗಿ ಬರೆದ ನನ್ನ ಮೊದಲ ಕೃತಿ ನಂದನವನ, ಅಧ್ಯಾಪಕಿಯಾಗಿ ಕಾಲು ಶತಮಾನ ಮಕ್ಕಳೊಂದಿಗೆ ಇದ್ದು, ಅವರಿಗಾಗಿ ಅನೇಕ ಹಾಡುಗಳನ್ನು, ಕವಿತೆಗಳನ್ನು ಕಟ್ಟುತ್ತಿದ್ದೆ. ನಂದನವನದಲ್ಲಿ ಮನೆಯ ಅಂಗಳ, ಹಳ್ಳಿಯ ಅಂಗಳ ನಗರದ ಅಂಗಳ, ನಿಸರ್ಗದ ಅಂಗಳ, ಜಗದ ಅಂಗಳ ಎಂದು ಮೂರು ವಿಧದಲ್ಲಿ ಕೆಲವು ಕವಿತೆಗಳು ಮೂಡಿವೆ. ಮಕ್ಕಳಿಗೆ ಮುದವೀಯಲು, ಕೆಲವು ಪ್ರಾಸ ಭರಿತವಾಗಿ, ಕೆಲವು ಕವಿತೆಗಳು ಮೂಡಿವೆ’ ಎನ್ನುತ್ತಾರೆ ಲೇಖಕಿ ಪರಿಮಳಾ ರಾವ್. ಮನೆಯ ಅಂಗಳ ವಿಭಾಗದಲ್ಲಿ ಅಮ್ಮನ ಹಾಡು, ಮಗುವಿನ ಹಾಡು, ಚಕ್ಕಲಿ, ದೊಣ್ಣೆ ಪೆಟ್ಟು, ಕೋಳಿಕೊಕ್ಕಣ್ಣ, ಗೋಲಿ ಆಟ, ಒಂದು, ಎರಡು, ಅತ್ತೆಮ್ಮ, ತಾರಮ್ಮ ಮುದ್ದು ಕೈ, ದಿಂಬಿನ ಬೆಟ್ಟ, ಭಾರಿ ಮಳೆ. ಹಳ್ಳಿಯ ಅಂಗಳ ವಿಭಾಗದಲ್ಲಿ ಕುಡುಗೋಲ್ ಕುಣಿತ, ಟೂ ಟೂ ಟೂ ಟೂ, ಅಜ್ಜಿ, ತಂಗಾಳಿ, ಚಪ್ಪಾಳೆ, ಲಟ್ಟಾಪಿಟ್ಟೆ, ಜಾಣಸೋಮ, ದೇವರೇನು ಕೊಟ್ಟ, ಕುಣಿತ, ಬೆಲ್ಲದ ಗಟ್ಟಿ, ಹುಡುಗರು-ಮಾಸ್ತರು, ಎದೆ ಝಮ್ಮೆಂತು. ನಿಸರ್ಗದಂಗಳ ವಿಭಾಗದಲ್ಲಿ ಕಾಡಿಗೆ ನಾನು ಹೋವುವೆನು, ಶ್ರಾವಣದ ಮಳೆ, ಮಕ್ಕಳ ಪಡೆ, ಚೆಂದಮಾಮ, ತೋಟ, ಬಿಸಿಲು ಮದುವೆ ಮಳೆ, ಕುರುಬನ ಕಥೆ. ನಗರದಂಗಳ ಕೂಸು-ಅಪ್ಪ, ಚೆಂದಿರ ಚೆಂಡು, ಚೈನಾ ಬೊಂಬೆ, ಮಂಜಿನ ಗಡ್ಡೆ, ಸುಬ್ಬು ಮಾವ, ನನ್ನ ಬೆಕ್ಕು, ಸಿನಿಮಾ ನೋಡೋಣ, ಬಿಳಿ ಕುರಿಮರಿ. ಜಗದಂಗಳ ವಿಭಾಗದಲ್ಲಿ ಹಕ್ಕಿ, ಗಾಳಿಪಟ, ಕನಸು, ಬೇಸರ, ಕೂಸೆ ಕೂಸೆ ಎಲ್ಲಿದ್ದೀಯಾ, ಸ್ಯಾಮಿ ಸ್ಯಾಮಿ, ಜೋಕಾಲಿ, ಬ್ರಹ್ಮಾಂಡ ನಮ್ಮದು, ಮುತ್ತಿನಸರ, ಉಯ್ಯಾಲೆ ಎಂಬ ಕವಿತೆಗಳು ಸಂಕಲನಗೊಂಡಿವೆ.
©2025 Book Brahma Private Limited.