ಖ್ಯಾತ ಸಾಹಿತಿ, ವಿಮರ್ಶಕ ಡಾ. ಕೆ.ವಿ. ತಿರುಮಲೇಶ್ ಅವರು ಬರೆದ ಮಕ್ಕಳ ಕವನ ಸಂಕಲನ-ನಾನೀದ್ದೀನಲ್ಲ ಅಂತಾನ್ ಪುಟ್ಟಾ. ಮಕ್ಕಳ ಕುತೂಹಲಕ್ಕೆ ಸಾಟಿಯೇ ಇಲ್ಲ. ಅವರ ಅದ್ಭುತ ಕಲ್ಪನಾ ಲೋಕವೂ ಅಷ್ಟೇ. ವಾಸ್ತವ ಲೋಕದ ಜಡ ವಸ್ತುಗಳನ್ನೂ ಸಹ ಹಸುಳೆಗಳು ಕಲ್ಪನಾಲೋಕದ ಮೂಲಕವೇ ಗ್ರಹಿಸುತ್ತವೆ. ಗೊಂಬೆಗಳು ಅವರಿಗೆ ಜೀವಂತ ವ್ಯಕ್ತಿಗಳಾಗಿ ಕಾಣಬರುವುದು ಈ ಕಾರಣಕ್ಕಾಗಿಯೇ. ಇಂತಹ ಸೂಕ್ಷ್ಮ ಮನಸ್ಸಿನ ಪದರುಗಳನ್ನು ಅಭ್ಯಸಿಸಿ, ಮಕ್ಕಳ ಮನೋಮಟ್ಟಕ್ಕೆ ಇಳಿದು, ಅವರಿಗೆ ತಿಳಿಯುವ ಸರಳ ಭಾಷೆಯಲ್ಲಿ ಕವಿತೆಗಳಿರುವುದು ಈ ಸಂಕಲನದ ವಿಶೇಷ. ಮಕ್ಕಳಿಗೆ ಪ್ರೇರಣೆಯಾಗಿ ಅವರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಕವಿಯು ಮಕ್ಕಳ ಮೂಲಕವೇ ಮತ್ತೊಂದು ಮಗುವಿಗೆ ‘ನಾನಿದ್ದೀನಲ್ಲ ಅಂತಾನ್ ಪುಟ್ಟಾ’ ಎಂದು ಅವರ ಉತ್ಸಾಹವನ್ನು ಹುರಿದುಂಬಿಸುವಂತೆ ಕೃತಿಗೆ ಶೀರ್ಷಿಕೆಯನ್ನು ನೀಡಿದ್ದಾರೆ.
©2024 Book Brahma Private Limited.