‘ಪುಟ್ಟಗೌರಿ’ ಲೇಖಕಿ ಜಯಲಕ್ಷ್ಮೀ ಎನ್.ಎಸ್. ಕೋಳಗುಂದ ಅವರು ರಚಿಸಿರುವ ಮಕ್ಕಳ ಕವಿತೆಗಳ ಸಂಕಲನ. ಲೇಖಕ ನಾ. ದಾಮೋದರ ಶೆಟ್ಟಿ ಅವರು ಮುನ್ನುಡಿ ಬರೆದು. ‘ಮಕ್ಕಳ ಸಾಹಿತ್ಯ ರಚನೆ ಮಾಡುವಾಗ ಮಕ್ಕಳ ಜೊತೆಗಿನ ನಿರಂತರ ಒಡನಾಟ, ಅವರು ಬಲುಬೇಗ ಗ್ರಹಿಸಬಲ್ಲ ಪದಗುಚ್ಛಗಳ ಅರಿವು, ಅವರ ಮನಸ್ಸಿನ ಆಳ-ಅಗಲದ ಜ್ಞಾನ ಇತ್ಯಾದಿ ಪರಿಜ್ಞಾನ ಕವಿಯಾದವರಿಗೆ ದಟ್ಟವಾಗಿರಬೇಕು. ಮಕ್ಕಳ ಬಗೆಗೆ ತೀವ್ರತಮ ಕುತೂಹಲವೂ ಇರಬೇಕು. ಅವರನ್ನು ಬಲುಬೇಗ ನಾಟಬಲ್ಲ ಸರಳ ಪದಕೋಶದ ಗಹನ ಅರಿವಿರಬೇಕು. ಇವು ಯಾವುದರಿಂದ ಹೊರತಾದರೂ ಮಕ್ಕಳ ಕವನ ರಚನೆ ಕಷ್ಟಕರ’ ಎನ್ನುತ್ತಾರೆ.
‘ಜಯಲಕ್ಷ್ಮೀ ಎನ್.ಎಸ್. ಕೋಳಗುಂದ ಅವರು ಮಕ್ಕಳ ಶಾಲಾ ಶಿಕ್ಷಕಿ. ಕವಿ ಹೃದಯವುಳ್ಳವರೂ ಆಗಿರುವುದರಿಂದ ಮಕ್ಕಳ ಮನಸ್ಸನ್ನು ಅರಿಯುವುದು ಅವರಿಗೆ ಸಾಧ್ಯವಾಗಿದೆ. ‘ತಾಯೊಡಲ ತಲ್ಲಣ’ ಎಂಬ ಕವನ ಸಂಕಲನದ ಮೂಲಕ ಕವಯತ್ರಿಯಾಗಿ ಸಮಾಜಮುಖಿಯಾದ ಜಯಲಕ್ಷ್ಮಿಯವರು, ಈ ಕೃತಿಯ ಮೂಲಕ ಮಕ್ಕಳ ಕವಿತೆಗಳಲ್ಲೂ ಪ್ರಯೋಗ ಮಾಡಿದ್ದಾರೆ, ಮಕ್ಕಳ ಕವಿತೆಗಳೆಂಬ ವಿಶಾಲ ತಳಹದಿಯ ಮೇಲೆ ದೇಶ ಭಕ್ತಿಗೀತೆಗಳನ್ನು, ಭಕ್ತಿಗೀತೆಗಳನ್ನು ಕೂಡಾ ಪೋಣಿಸಿ ಕೊಟ್ಟಿದ್ದಾರೆ. ಹೆಚ್ಚಿನ ಕವಿತೆಗಳೂ ಮಕ್ಕಳ ಮಟ್ಟಕ್ಕೆ ಏರಿವೆ ಎಂಬುದು ಗಮನಾರ್ಹ. ಮೇಲ್ನೋಟಕ್ಕೆ ಗೋಚರಿಸುವ ಸಂಗತಿಯೆಂದರೆ ಇಲ್ಲಿನ ಪ್ರತಿಕವಿತೆಯೂ ಕಂಠಮೂಲಿ. ಹಾಡುವುದಕ್ಕೆಅನುಯೋಜ್ಯವಾಗುವ ದಾಟಿಗಳಲ್ಲಿ ರೂಪು ಪಡೆದಿವೆ ಎಂದೂ ಲೇಖಕ ದಾಮೋದರ ಶೆಟ್ಟಿ ಪ್ರಶಂಸಿಸಿದ್ದಾರೆ..
©2024 Book Brahma Private Limited.