ಖ್ಯಾತ ಕವಿ-ವಿಮರ್ಶಕ-ಲೇಖಕ ಡಾ. ಕೆ.ವಿ. ತಿರುಮಲೇಶ್ ಅವರ ಮಕ್ಕಳ ಕವನ ಸಂಕಲನ- ಬೀಸಿದರೆ ಉದುರಬೇಕು ನನ್ನತ್ರ ಹೂ ಹಣ್ಣು ನಕ್ಷತ್ರ. ಮಕ್ಕಳ ಕಲ್ಪನಾ ಲೋಕವೇ ಅದ್ಭುತ. ಅದು ತನ್ನಿಚ್ಛೆಯಂತೆ ಕ್ಷಣಾರ್ಧದಲ್ಲಿ ಆಗಿಬಿಡಬೇಕು ಎಂಬಷ್ಟು ಆತುರ, ಕುತೂಹಲ. ತಪ್ಪಿದರೆ, ತಾನಾಗೇ ಪ್ರಯೋಗಕ್ಕೆ ಇಳಿದು ಬಿಡುತ್ತದೆ. ಈ ಮಧ್ಯೆ, ಸಂಭವಿಸುವ ಅನಾಹುತಗಳು-ಅಪಾಯಗಳನ್ನು ಅದು ಲೆಕ್ಕಿಸುವುದೇ ಇಲ್ಲ.ದೂರದ ನಕ್ಷತ್ರಗಳನ್ನು ಹಿಡಿಯಬೇಕು ಎಂದು ಕೈಚಾಚುತ್ತದೆ. ಅವು ಸಿಗಲೇ ಬೇಕು ಎಂದು ಹಠ ತೊಡುತ್ತದೆ. ಇಲ್ಲದಿದ್ದರೆ ಅಳುತ್ತದೆ. ಮಕ್ಕಳ ಮನೋಜಗತ್ತಿನ ಈ ಪರಿಯ ಸೊಬಗನ್ನು ಅನುಭವಿಸುತ್ತಾ, ಕಲ್ಲಿಸಿಕೊಳ್ಳುತ್ತಾ ಬರೆದ ಕವನಗಳು, ಸರಳ ಭಾಷೆ ಹಾಗೂ ಅದ್ಭುತ ಕಲ್ಪನೆಗಳಿಂದ ಓದುಗರ ಗಮನ ಸೆಳೆಯುತ್ತವೆ.
©2025 Book Brahma Private Limited.