ಹಾಡು ಮೆಚ್ಚುವಂತದ್ದಾಗಿದೆ. ಜಾನಪದ ಕತೆಗಳು ಪಂಚತಂತ್ರ ಕತೆಗಳು ಬಗೆ ಬಗೆಯ ದಂತಕತೆಗಳು ಇವುಗಳಿಂದ ಸ್ಫೂರ್ತಿ ಪಡೆದು ರಚಿಸಬಹುದಾದ ಮಕ್ಕಳ ಕವನಗಳೆಂಬ ಮೊಳಕೆಗಳು ರೆಡ್ಡಿಯವರ ಹಸ್ತಸ್ಪರ್ಶದಲ್ಲಿ ಸುಂದರ ಗಿಡಮರಗಳಾಗಿ ಅರಳಿಕೊಳ್ಳಲೆಂಬ ಹಾರೈಕೆ ನನ್ನದು. ಜಂಗಮಜೋಗಿಯಲ್ಲಿರುವ ‘ದಿನಚರಿ’, ‘ವೀರಯೋಧ’ಎಂಬ ಕವನಗಳು ‘ಮಕ್ಕಳಮಂದಾರ’ದ ‘ನನ್ನ ದಿನಚರಿ’, ‘ನಾನು ಸಿಪಾಯಿಯಾಗುವೆನು’ ಕವನಗಳನ್ನು ನೆನಪಿಸುತ್ತವೆ. ಇಂಥ ಪುನರುಕ್ತಿಯನ್ನು ನಿವಾರಿಸಿಕೊಂಡು ಮೇಲೆ ಸೂಚಿಸಿದಂತೆ ಕಥಾಸಾಗರವನ್ನು ಕಡೆದು ನವನೀತವನ್ನೇ ಸಾಧಿಸಬಹುದಲ್ಲವೆ? ‘ಜಂಗಮಜೋಗಿ’ಯು ಈ ಸಂಕಲನದಲ್ಲಿರುವ ಒಂದು ನೀಳ್ಗವನ. ಬೊಮ್ಮನಹಳ್ಳಿಯ ಕಿಂದರಿಜೋಗಿ ಮಾದರಿಯಲ್ಲಿ ರಚಿತವಾಗಿರುವ ಮೈಮ್ಕಾವ್ಯವೆನ್ನಬಹುದು. ಇಲಿಗಳ ಬದಲಿಗೆ ಇಲ್ಲಿ ಕೋತಿಗಳಿವೆ. ಬಣ್ಣದಚಿಟ್ಟೆ ಸಂಕಲನದಲ್ಲಿರುವ ಕಾಡಿನ ಮಂಗದಲ್ಲಿ ಕೋತಿಯೊಂದು ನಾಡಿಗೆ ಬಂದು ಫಜೀತಿಪಡುವ ವಿವರಗಳಿವೆ. ಜಂಗಮಜೋಗಿಯಲ್ಲಿ ಕೋತಿಗಳೆಲ್ಲ ಒಗ್ಗೂಡಿ ನಾಡಿಗೆ ಧಾಳಿಯಿಡುವ ವಿವರಗಳಿವೆ. ಜನತೆಯನ್ನು ಫಜೀತಿಗೀಡುಮಾಡುವ ವಿವರಗಳಿವೆ. ಪ್ರಾಣಿಗಳ ಸಭೆ, ಕಾಡಿನ ಸಿರಿ, ಪ್ರಕೃತಿ ಮಾತೆ, ಇಂಥ ಕವನಗಳಲ್ಲಿ ಪರಿಸರ ವಿನಾಶ ಭೂಮಿ ವಿನಾಶದ ಸೂಚನೆಗಳಿದ್ದು ಇಂದಿನ ಯುಗಧರ್ಮದ ಮುಖವಾಣಿಗಳಂತೆ ತೋರುತ್ತವೆ. ಶ್ರೀ. ಸಿ. ಎಂ. ಗೋವಿಂದರೆಡ್ಡಿಯವರಿಗೆ ಬರೆವಣಿಗೆಯು ಲೀಲಾ ಜಾಲವೆಂಬಂತೆ ಸಿದ್ಧಿಸಿದೆ. ಆದರೆ ಅದು ಬರಿಯ ಜಾಲವಾಗದೆ, ‘ಗುಬ್ಬಿಯ ಬದುಕು’ ಹೇಗೋ ಹಾಗೆ ಲೀಲೆಯಾಗಿ ಮೂಡಿಬರಲೆಂದು ಪ್ರೊ.ವಿ.ಚಂದ್ರಶೇಖರ ನಂಗಲಿ ಹಾರYಸಿದ್ದಾರೆ.
©2024 Book Brahma Private Limited.