‘ಪುಟಾಣಿ ಪುಡಿಕೆ’ ಕೃತಿಯು ತಮ್ಮಣ್ಣ ಬೀಗಾರ ಅವರ ಸಚಿತ್ರ ಮಕ್ಕಳ ಕವನ ಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಸೈಯದ್ ಝಮೀರುಲ್ಲಾ ಷರೀಫ್ ಅವರು, ಮಕ್ಕಳ ಸಾಹಿತ್ಯ ತನ್ನದೇ ಆದ ಹಾದಿಯಲ್ಲಿ ಮುಂದುವರಿಯುತ್ತಿದೆ ಎನ್ನುವುದಕ್ಕೆ ತಮ್ಮಣ್ಣ ಬೀಗಾರರ ಮಕ್ಕಳ ಕವಿತೆಗಳು ಸಾಕ್ಷಿಯಾಗಿವೆ. ಮನಮೆಚ್ಚಿದ ಪ್ರಾಣಿ, ಪಕ್ಷಿ, ಗಿಡಮರಗಳೊಡನೆ ಒಂದಾಗಿ ಧೈ ಮೈಮರೆಯುವ ಮುಗ್ಧ ಮನಸ್ಸುಗಳಲ್ಲಿನ ಭಾವನೆಗಳಿಗೆ ಸ್ಪಂದಿಸುವ ಪ್ರಕೃತಿಮಯವಾದ ವಸ್ತುವನ್ನೊಳಗೊಂಡಿರುವ ಕವಿತೆಗಳು ಈ ಸಂಕಲನದಲ್ಲಿವೆ. ಸಾಹಿತ್ಯವನ್ನು ಸಂಗೀತದೊಡನೆ ಸಂಗಮಗೊಳಿಸಲು ವ ಸಹಾಯಕವಾಗುವ ಇಲ್ಲಿನ ಶಬ್ದಗಳು, ಅಂತ್ಯಪ್ರಾಸದ ಶೈಲಿ, ತೊದಲುನುಡಿಗೆ ಸರಿಹೊಂದುವ ಅತ್ಯಂತ ಸರಳಭಾಷೆ, ಮೊದಲಾದ ಲಕ್ಷಣಗಳು ಮಕ್ಕಳ ಮನಸ್ಸನ್ನು ಬಹುಬೇಗ ಸೆರೆ ಹಿಡಿಯಲು ಸಹಾಯಕವಾಗಬಲ್ಲವು. ಧ್ವನಿಪೂರ್ಣವಾದ ಕೆಲವು ಕವಿತೆಗಳು ಸಮಾಜಕ್ಕೆ ಸವಾಲಾಗಿ ನಿಲ್ಲಬಲ್ಲವು. ಹೂವು, ಮಳೆ, ಸಾಲು ಮೊದಲಾದ ಕವಿತೆಗಳ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಎಚ್ಚರಿಸುವ ಪ್ರಯತ್ನ ತಮ್ಮಣ್ಣ ಬೀಗಾರರಿಂದಾಗಿದೆ ಎಂದಿದ್ದಾರೆ. ಹೂವು ಕವನದಲ್ಲಿ ಪರಿಮಳದ ಮೂಲಕ ಸುತ್ತಮುತ್ತಲಿನ ಪರಿಸರವನ್ನು ತನ: ಪವಿತ್ರಗೊಳಿಸುವ ಪರಿಯನ್ನು ಪರಿಚಯಿಸಿರುವ ಅವರು ಗುಣದ ಮೂಲಕ ಅಜ್ಜಿಕತೆ, ಜನಪದಗಿ ಪರಿವರ್ತಿಸಬೇಕೆಂಬ ಕಿವಿಮಾತನ್ನು ಹೇಳಿದ್ದಾರೆ. ಮಳೆ ಕವನದಲ್ಲಿ ಸಾಂಸ್ಕೃತಿಕವಾಗಿ ಮಕ್ಕಳ ಮನವು ಬೆಳೆಗೆ ಮೂಲ ಮಳೆ, ಮಳೆಗೆ ಮೂಲ ಕಾಡು, ಈ ಸೃಷ್ಟಿ ಸೌಂದರ್ಯದ ತಾಯಿ ಮತ್ತು ಅಜ್ಜಿ ಹೊಂದಿದ್ದ ಸಂಬಂಧವನ್ನು ರಕ್ಷಿಸುವ ಜವಾಬ್ದಾರಿ ಮಾನವನದು, ಆದರೆ ಇಂದು ಕಾಡು ಬಲಪಡಲು ಅದು ನೆರವಾಯಿತು ನಾಶಗೊಳಿಸಿ ಸಂಬಂಧದ ಕೊಂಡಿ ಕಳಚುತ್ತಿರುವ ಮಾನವನಿಗೆ ಮುಗ್ಧ ಸೃಷ್ಟಿಯಾಗುತ್ತಿದ್ದರೂ ಅದನ್ನು ಮನಸ್ಸು ಈ ಕವನದ ಮೂಲಕ ಎಚ್ಚರಿಸುತ್ತಿದೆ ಎನ್ನುತ್ತಾರೆ.
©2025 Book Brahma Private Limited.