ಮಕ್ಕಳ ಸಾಹಿತ್ಯ ಅವಗಣನೆಗೆ ತುತ್ತಾಗಿದ್ದ ಕಾಲದಲ್ಲಿ ವಿಫುಲವಾಗಿ ಮಕ್ಕಳ ಸಾಹಿತ್ಯವನ್ನು ಸೃಷ್ಟಿಸಿ ಆ ಅರಣೆಯನ್ನು ತುಂಬಿಕೊಟ್ಟವರು ಟಿ.ಎಸ್. ನಾಗರಾಜಶೆಟ್ಟಿ, ತಮ್ಮ ಪ್ರತಿಭೆಯನ್ನು ಸಂಪೂರ್ಣವಾಗಿ ಮಕ್ಕಳ ಸಾಹಿತ್ಯ ನಿರ್ಮಿತಿಗೇ ಮುಡುಪಾಗಿಟ್ಟವರು. ಅವರು ಮಕ್ಕಳಿಗಾಗಿ ಬರೆದ ಕಥನಾತ್ಮಕ ಕವಿತೆಗಳು ಆಕರ್ಷಕವಾಗಿವೆ. ಅಂಥ ಅನೇಕ ಆಕರ್ಷಕ ಕವಿತೆಗಳು ಪ್ರಸ್ತುತ ಸಂಗ್ರಹದಲ್ಲಿವೆ. ಪ್ರಚಲಿತದಲಿದ್ದ ಅನೇಕ ಗದ್ಯ ಕಥೆಗಳನ್ನು ಸುಂದರ ಪದ್ಯರಚನೆಗಳಾಗಿ ಪರಿವರ್ತಿಸಿದ್ದು ಶ್ರೀಯುತರ ಗಮನಾರ್ಹ ಕಾಣಿಕೆ ಎಂದು ಡಾ. ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.