ಪಟ್ ಪಟೆಕಾಯಿ ಚಟ ಪಟ ವಿಜಯಶ್ರೀ ಹಾಲಾಡಿ ಅವರ ರಚನೆಯ ಕವಿತೆಗಳಾಗಿವೆ. ಮಕ್ಕಳಿಗೆ ಅವರದೇ ಖಾಸಗಿ ಜಗತ್ತುಂಟು, ಹಿರಿಯರು ನಮ್ಮ ಜಗತ್ತನ್ನು ಮಕ್ಕಳ ಮೇಲೆ ಹೇರಲು ನೋಡುತ್ತೇವೆ. ಮಕ್ಕಳಾದರೋ ಪ್ರಾಣಿ, ಪಕ್ಷಿಗಳ ಜಗತ್ತಿನ ತನ್ಯಯರಾಗಿ ಬೆರೆತು ಬೆಲೆ ಕಟ್ಟಲಾರದ ಸಂತೋಷ ಪಡೆಯುತ್ತಾರೆ. ವಿಜಯಶ್ರೀ ಹಾಲಾಡಿ ಮಕ್ಕಳ ಜಗತ್ತನ್ನು ಬೇಷರತ್ತಾಗಿ ಮಾನ್ಯ ಮಾಡುವ ಮಾತೃತ್ವದ ಮೂರ್ತಿ, ಅವರ ಪದ್ಯಗಳ ಹೊಸ ಭಂಗ, ನವೀನ ಕಲ್ಪಕತೆ, ಬೆರಗು ಪಡಿಸುವ ಚಿತ್ರಕಶು ಮಕ್ಕಳಗೆ ಪ್ರಿಯವಾಗುವುದರಲ್ಲಿ ಸಂದೇಹವೇ ಇಲ್ಲ. ಎಂದು ಡಾ. ಎಚ್. ಎಸ್, ವೆಂಕಟೇಶ ಮೂರ್ತಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.