ರಾಜಶೇಖರ ಕುಕ್ಕುಂದಾ ಅವರ ‘ಸೋನ ಪಾಪಡಿ’ ಮಕ್ಕಳ ಪದ್ಯಗಳ ಸಂಕಲನವಾಗಿದೆ. ಇಲ್ಲಿನ ಪದ್ಯಗಳಲ್ಲಿರುವ ಪ್ರಾಸವಂತೂ ಪುಟ್ಟ ಮಕ್ಕಳನ್ನು ರಂಜಿಸಬಲ್ಲವು. ಈ ಸಂಕಲನಕ್ಕೆ ಚಿಂತಾಮಣಿ ಕೊಡ್ಲೆಕೆರೆ ಅವರು ಹಿನ್ನುಡಿ ಬರೆದಿದ್ದಾರೆ. ‘ಕನ್ನಡದ ಮಕ್ಕಳು ಸವಿಯಲೆಂದು ಹೊಸ ರುಚಿಯ ಸಿಹಿ ತಿನಿಸನ್ನೇ ಇದೀಗ ಅವರು ಸಿದ್ಧಪಡಿಸಿದ್ದಾರೆ. ಈ ಪದ್ಯಗಳಲ್ಲಿ ಕವಿ, ಮಕ್ಕಳ ಮನಸ್ಸಿನಲ್ಲಿ ಹುಟ್ಟುವ ಚಿತ್ರ ವಿಚಿಚತ್ರ ಕಲ್ಪನೆ, ವಿನೋದ, ವಿಚಾರಗಳನ್ನು ಅಷ್ಟೇ ರಂಜಕವಾಗಿ ಚಿತ್ರಿಸಿದ್ದಾರೆ. ಉಪ್ಪಿಟ್ಟಿನ ಕುರಿತು ಮಕ್ಕಳಿಗಿರುವ ಬೇಸರ, ಸ್ಕೂಲೇ ಇರಬಾರದೆಂಬ ಅವರ ಒಳ ಆಸೆ, ಆನ್ಲೈನ್ ಪಾಠದ ಹೊಸ ಸನ್ನಿವೇಶ,ಸೈಕಲ್ ಪ್ರೀತಿ, ಮಳೆ-ಮೋಡ-ಗುಬ್ಬಿ ಮಕ್ಕಳ ಕುತೂಹಲ ಹೆಚ್ಚಿಸುವ ಹಲವು ದಿಕ್ಕುಗಳು. ಮಕ್ಕಳನ್ನು ಸೆಳೆಯಲೆಂದು ಕವಿ ‘ಸೋನ ಪಾಪಡಿ’ಯನ್ನು ನೀಡಿದ್ದಾರೆ. ಇದು ಮಕ್ಕಳನ್ನು ತಲುಪಬೇಕು. ನಾಡಿನಾದ್ಯಂತ ಬಹುಪಾಲು ತಂದೆ ತಾಯಿಯರು ಇಂಥ ಒಳ್ಳೆಯ ಪದ್ಯಗಳನ್ನು ಮಕ್ಕಳಿಗೆ ಓದಿ ಹೇಳಿ ಅವರಲ್ಲಿ ಆಸಕ್ತಿ ಹುಟ್ಟಿಸಬೇಕು. ಆಗ ಖಂಡಿತ ಸಾಹಿತ್ಯ ಓದುವ ಅಭಿರುಚಿ ಮಕ್ಕಳಲ್ಲಿ ಮೂಡುತ್ತದೆ ಎಂದಿದ್ದಾರೆ.
©2024 Book Brahma Private Limited.