‘ ಸಂತನೊಳಗಿನ ಧ್ಯಾನ’ ಕೃತಿಯು ವಾಣಿ ಭಂಡಾರಿ ಅವರ ಗಜಲ್ ಸಂಕಲನ. ಕೃತಿಯ ಕುರಿತು ಅಲ್ಲಾಗಿರಿರಾಜ್ ಕನಕಗಿರಿ ಅವರು "ನಿನ್ನನ್ನು ನೀನು ಸಂಪೂರ್ಣವಾಗಿ ಭಸ್ಮ ಮಾಡಿಕೊಳ್ಳುವ ತನಕ ನೀನು ದುಃಖಗಳಿಂದ ತಪ್ಪಿಸಿಕೊಳ್ಳಲಾರೆ" ಎಂದು 12ನೇ ಶತಮಾನದ ಸೂಫಿ ಕವಿ ಫರೀದುದ್ದೀನ್ ಅತ್ತಾರ್ ಹೇಳಿದಂತೆ, ಸುಮಾರು ವರ್ಷಗಳಿಂದ ಸುಖ, ದುಃಖದ ನೆರಳಲ್ಲಿ ನರಳಿದ ವಾಣಿ ಭಂಡಾರಿ ಇತ್ತೀಚೆಗೆ ತನ್ನನ್ನು ತಾನೇ ಬದಲಿಸಿಕೊಂಡ ಆತ್ಮಧ್ಯಾನದ ಮಾರ್ಗ ಏನೆಂದರೆ, ಓದು ಮತ್ತು ಮನದ ಖುಷಿಗಾಗಿ ವಚನ, ಲೇಖನ. ಗಜಲ್, ಕಾವ್ಯಧಾಟಿಯ ಬರಹದ ಮೂಲಕ ತನ್ನೊಳಗಿನ ಬದಲಾವಣೆ ಕಂಡುಕೊಂಡ ವಿಚಾರಧಾರೆಯ ಫಲಿತಾಂಶವೇ “ಸಂತನೊಳಗಿನ ಧ್ಯಾನ" ಎಂಬ ಗಜಲ್ ಕೃತಿ ಎಂದೇಳಲು ಎನಗೆ ಹೆಮ್ಮೆ ಅನಿಸುತ್ತದೆ. ಲೇಖಕಿಯ ಈ ಗಜಲ್ ಶೇರ್ ತಣ್ಣಗೆ ಉತ್ತರಿಸುವ ಪರಿ ನೋಡಿದರೆ ನಿಜಕ್ಕೂ ಯಾವಾಗ ತಮ್ಮೊಳಗಿನ ಕವಿಗೆ, ಸಂತನಿಗೆ ಎಚ್ಚರಿಸುವ ಕಾಲವನ್ನು ಉಪಯೋಗಿಸಿಕೊಂಡು ವಾಸ್ತವದ ಆಟ ನಾಟಕಕ್ಕೆ ಮಾರ್ಮಿಕವಾಗಿ ಕವಿತೆ ಮೂಲಕ ಜವಾಬ್ ನೀಡುವರೋ ಬಲ್ಲವರಾರು? ಅದಕ್ಕೆ ಹೇಳಿದ್ದು 'ವಾಣಿ'ಯ ಗಜಲ್ ಬೆಳಗಿದ ಅರಿಯದೆ ತಿಳಿಯದೆ, ಏನೇನೋ ಹೇಳಬೇಡಿ ಎನ್ನುವ ಅವರ ಈ ಶೇರ್ ಬೆನ್ನ ಹಿಂದಿನ ಪ್ರೀತಿಯ ದುಷ್ಕ ನಗೆ ನಾಟದೇ ಇರಲಾರದು. “ಸಂತನೊಳಗಿನ ಧ್ಯಾನ" ಕಂಡು ಬಯಲು ಮಾತು ನಿಲ್ಲಿಸಿದೆ. ಬಡವರ ಕನಸಿನ ಚೀಲಗಳು ರಸ್ತೆ ಬದಿ ಬಿದ್ದು ನರಳುತ್ತಿವೆ”. ತುಂಬ ಸೂಕ್ಷ್ಮ ಸಂವೇದನ ಧಾಟಿಯ ಇಂಥ ಗಜಲ್ ಶೇರ್‌ಗಳ ನಡುವೆ ವಾಣಿ ಭಂಡಾರಿ ಅವರು, ತುಂಬ ಮಹತ್ವದ ಚೌಕಟ್ಟಿನ ಗಜಲ್ ಈ ಸಂಕಲನದ ಮೂಲಕ ನಾಡಿನ ಓದುಗರ ಬೊಗಸೆ ತುಂಬಿದ್ದಾರೆ’ ಎನ್ನುತ್ತಾರೆ.
©2024 Book Brahma Private Limited.