‘ಸಂದಲ್’ ಅಲ್ಲಾಗಿರಿರಾಜ್ ಅವರ ಗಜ್ಹಲ್ ಸಂಕಲನ. ಸಂದಲ್ ಎಂದರೆ ಸಂಭ್ರಮ, ಸಡಗರ, ಖುಷಿ, ಜಾತ್ರೆ ಸೂಫಿ ಸಂತರ ಮಜರ್ (ಸಮಾಧಿ) ಮುಂದೆ ಜರುಗುವ ಉರುಸು ಗಂಧದ ರಾತ್ರಿ ಹೀಗೆ ಅನೇಕ ಶಬ್ದದ ಅರ್ಥ ನೀಡುವ ಉರ್ದು ಪದ ಸಂದಲ್. ಹಾಗಾಗಿ ನಾನೂ ಕೂಡಾ ನನ್ನೊಳಗಿನ ಅನೇಕ ಮಗ್ಗಲುಗಳ ಸಂಭ್ರಮವನ್ನು ಗಜ್ಹಲ್ ರೂಪಕ್ಕೆ ತಂದು ನಿಮ್ಮ ಓದಿಗಾಗಿ ಬೊಗಸೆ ತುಂಬಿದ್ದೇನೆ ಎನ್ನುತ್ತಾರೆ ಕವಿ ಅಲ್ಲಾಗಿರಿರಾಜ್. ಕನ್ನಡ ಸಾಹಿತ್ಯಪರಂಪರೆಯಲ್ಲಿ ವಾಸ್ತವ ದಿನಮಾನದಲ್ಲಿ ತುಂಬಾ ಗಮನ ಸೆಳೆಯುವ ಕಾವ್ಯ ಪ್ರಕಾರಗಳಲ್ಲಿ ಗಜ್ಹಲ್ ಸಹ ವ್ಯಾಪಕವಾಗಿ ಓದಿಸಿಕೊಳ್ಳುತ್ತಿರುವುದು ಸಂತಸ ಪಡುವ ಸಂಗತಿ. ಒಟ್ಟಿನಲ್ಲಿ ಕನ್ನಡದ ಮನಸುಗಳು ಗಜ್ಹಲ್ ಕಾವ್ಯವನ್ನು ಅನ್ಯರ ಮನೆ ಮಗು ಎನ್ನದೆ ಪ್ರೀತಿಸುವ, ಮುದ್ದಿಸುವ ತಮ್ಮದೇ ಮನೆ ಮಗುವೆಂದು ಗುಣಗಾನ ಮಾಡುವುದು.
ಮೆಚ್ಚಲೇ ಬೇಕು. ಇಂತಹ ದೊಡ್ಡ ಗುಣ ಇರುವುದರಿಂದಲೇ ಕನ್ನಡ ಭಾಷೆಯಲ್ಲಿ ಗಜ್ಹಲ್ ಹನಿಯಾಗಿ,ಝರಿಯಾಗಿ, ಹಳ್ಳವಾಗಿ ಹರಿಯಲು ಓದುಗರ ಮನಸು ಮುಟ್ಟಲು ಕಾರಣವಾಗಿದೆ. ಗಜ್ಹಲ್ ಮುಂದೆ ನದಿಯಾಗುವ ಕಾಲ ಬಂದೇ ಬರುತ್ತದೆ ಎಂಬ ಆಶಯದೊಂದಿಗೆ ಅಲ್ಲಾ ಗಿರಿರಾಜ್ ಅವರು ಈ ಕೃತಿಯನ್ನು ಪ್ರಕಟಿಸಿದ್ದಾರೆ.
©2025 Book Brahma Private Limited.