ಖ್ಯಾತ ಸಾಹಿತಿ, ವಿಮರ್ಶಕ ಡಾ. ಕೆ.ವಿ. ತಿರುಮಲೇಶ್ ಅವರು ಬರೆದ ಮಕ್ಕಳ ಕವನ ಸಂಕಲನ-ಓ ಲಲ. ಮಕ್ಕಳ ಕುತೂಹಲಕ್ಕೆ ಸಾಟಿಯೇ ಇಲ್ಲ. ಅವರ ಅದ್ಭುತ ಕಲ್ಪನಾ ಲೋಕವೂ ಅಷ್ಟೇ. ವಾಸ್ತವ ಲೋಕದ ಜಡ ವಸ್ತುಗಳನ್ನೂ ಸಹ ಹಸುಳೆಗಳು ಕಲ್ಪನಾಲೋಕದ ಮೂಲಕವೇ ಗ್ರಹಿಸುತ್ತವೆ. ಗೊಂಬೆಗಳು ಅವರಿಗೆ ಜೀವಂತ ವ್ಯಕ್ತಿಗಳಾಗಿ ಕಾಣಬರುವುದು ಈ ಕಾರಣಕ್ಕಾಗಿಯೇ. ಇಂತಹ ಸೂಕ್ಷ್ಮ ಮನಸ್ಸಿನ ಪದರುಗಳನ್ನು ಅಭ್ಯಸಿಸಿ, ಮಕ್ಕಳ ಮನೋಮಟ್ಟಕ್ಕೆ ಇಳಿದು, ಅವರಿಗೆ ತಿಳಿಯುವ ಸರಳ ಭಾಷೆಯಲ್ಲಿ ಕವಿತೆಗಳಿರುವುದು ಈ ಸಂಕಲನದ ವಿಶೇಷ. ‘ಓ ಲಲ’ ಎನ್ನುವುದು ಮಕ್ಕಳೂ ಮೊದಮೊದಲಿಗೆ ಮಾತನಾಡಲು ಕಲಿಯುವ ಪ್ರಯತ್ನದ ಶಬ್ದ. ಇದಕ್ಕೆ ಯಾವುದೇ ಆರ್ಥವಿರದಿದ್ದರೂ ಏನೋ ಒಂದನ್ನು ಹೇಳುವ ಆತುರ, ಕುತೂಹಲದ ಸಂಕೇತವಾಗಿ ‘ಲಲ’ ಎನ್ನುತ್ತದೆ. ಅದನ್ನೇ, ಕವಿಗಳು ಈ ಕೃತಿಯ ಶೀರ್ಷಿಕೆಯಾಗಿಸಿದ್ದಾರೆ.
©2024 Book Brahma Private Limited.