ಖ್ಯಾತ ಸಾಹಿತಿ, ವಿಮರ್ಶಕ ಡಾ. ಕೆ.ವಿ. ತಿರುಮಲೇಶ್ ಅವರು ಬರೆದ ಮಕ್ಕಳ ಕವನ ಸಂಕಲನ-ನೆನೆ ಪುಟ್ಟ ನೆನೆ. ಮಕ್ಕಳ ಕುತೂಹಲಕ್ಕೆ ಸಾಟಿಯೇ ಇಲ್ಲ. ಅವರ ಅದ್ಭುತ ಕಲ್ಪನಾ ಲೋಕವೂ ಅಷ್ಟೇ. ವಾಸ್ತವ ಲೋಕದ ಜಡ ವಸ್ತುಗಳನ್ನೂ ಸಹ ಹಸುಳೆಗಳು ಕಲ್ಪನಾಲೋಕದ ಮೂಲಕವೇ ಗ್ರಹಿಸುತ್ತವೆ. ಗೊಂಬೆಗಳು ಅವರಿಗೆ ಜೀವಂತ ವ್ಯಕ್ತಿಗಳಾಗಿ ಕಾಣಬರುವುದು ಈ ಕಾರಣಕ್ಕಾಗಿಯೇ. ಇಂತಹ ಸೂಕ್ಷ್ಮ ಮನಸ್ಸಿನ ಪದರುಗಳನ್ನು ಅಭ್ಯಸಿಸಿ, ಮಕ್ಕಳ ಮನೋಮಟ್ಟಕ್ಕೆ ಇಳಿದು, ಅವರಿಗೆ ತಿಳಿಯುವ ಸರಳ ಭಾಷೆಯಲ್ಲಿ ಕವಿತೆಗಳಿರುವುದು ಈ ಸಂಕಲನದ ವಿಶೇಷ. ಮಕ್ಕಳು ತಂದೆ-ತಾಯಿಯ ಮನಸ್ಸನ್ನು ಬೇಗನೇ ಆರ್ಥ ಮಾಡಿಕೊಳ್ಳುತ್ತಾರೆ. ಅವರು ಹೇಳಿದ ಮಾತುಗಳನ್ನು ಗಮನವಿಟ್ಟು ಕೇಳುತ್ತಾರೆ. ಆದ್ದರಿಂದ, ತಂದೆ-ತಾಯಿ ಸೇರಿದಂತೆ ಅಜ್ಜ-ಅಜ್ಜಿಯರು ಕಥೆಗಳನ್ನು ಹೇಳುತ್ತಾ, ಅವರ ಮನಸ್ಸಿಗೆ ಸಂಸ್ಕಾರ ನೀಡುತ್ತಾರೆ. ಇಂತಹ ಸಂಗತಿಗಳ ಕುರಿತು ಪದೇ ಪದೆ ಮೆಲುಕು ಹಾಕುತ್ತಿರು ಎಂಬ ಅರ್ಥದಲ್ಲಿಯೂ ಕವಿಗಳು ‘ನೆನೆ ಪುಟ್ಟ ನೆನೆ’ ಎಂಬ ಶೀರ್ಷಿಕೆ ನೀಡಿ, ಮಕ್ಕಳ ವ್ಯಕ್ತಿತ್ವ ರೂಪಿಸುವ ಉದ್ದೇಶ ತೋರಿದ್ದಾರೆ.
©2024 Book Brahma Private Limited.