ಮಕ್ಕಳಿಗಾಗಿ ರಚಿಸಿರುವ ಶಿಶುಪ್ರಾಸಗಳು ಈ ಸಂಕಲನದಲ್ಲಿವೆ. ಸಚಿತ್ರವಾಗಿ ಪ್ರಕಟವಾಗಿರುವ ಈ ಸಂಕಲನದಲ್ಲಿ ೧೦೦ಕ್ಕೂ ಹೆಚ್ಚು ಶಿಶುಪ್ರಾಸಗಳಿವೆ. ಮಕ್ಕಳ ಮನಸ್ಸಿಗೆ ಹಿಡಿಸುವಂತೆ ಸರಳವಾದ ಭಾಷೆ, ಲಯ, ಚಿಕ್ಕ ಚಿಕ್ಕ ವಾಕ್ಯಗಳು, ಕಿವಿಗೆ ಇಂಪಾಗಿ ಕೇಳಿಸುವ ಲಾಸ್ಯ ಇಲ್ಲಿನ ಕವಿತೆಗಳ ವಿಶೇಷತೆ. ಪ್ರಸ್ತುತ ‘ಟ್ವಿಂಕಲ್ ಟ್ವಿಂಕಲ್ ಲಿಟಲ್ ಅಂಕಲ್’ ಕಾಲದಲ್ಲಿ ಕನ್ನಡದಲ್ಲಿ ಮುದ್ರಣವಾಗುತ್ತಿರುವ ಯಾವುದೇ ಬರಹವನ್ನಾದರೂ ಅದು ಕತೆ, ಕಾದಂಬರಿ, ನಾಟಕ, ವಿಮರ್ಶೆ ಯಾವುದೇ ಆಗಿದ್ದರೂ ಓದುವವರಲ್ಲಿ ಹೆಚ್ಚಿನವರು ಬಡ ಕನ್ನಡಿಗರ, ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳು. ಇನ್ನೊಂದು ಹತ್ತು ಹದಿನೈದು ವರ್ಷಗಳ ಆನಂತರದಲ್ಲಿ ಉಳಿಯುವ ಕನ್ನಡದ ಓದುಗರೂ ಇವರೇ. ಆದ್ದರಿಂದ, ನನ್ನಂತಹ ಎಲ್ಲ ಲೇಖಕರ ಕನ್ನಡ ಭಾಷೆಯ ಬರಹಗಳಿಗೆ ಓದುಗರನ್ನು ತಯಾರು ಮಾಡುತ್ತಿರುವ ಶ್ರೀ ಸಿ.ಎಂ.ಗೋವಿಂದರೆಡ್ಡಿಯವರಂತಹ ಮಕ್ಕಳ ಸಾಹಿತಿಗಳಿಗೆ, ಕನ್ನಡದ ಎಲ್ಲ ಬರಹಗಾರರೂ ಕೃತಜ್ಞರಾಗಿರಬೇಕು ಎಂದು ಹಿರಿಯ ಕವಿ, ಕತೆಗಾರರಾದ ಬೊಳುವಾರು ಮಹಮ್ಮದ್ ರವರು ಅಭಿಪ್ರಾಯಪಟ್ಟಿದ್ದಾರೆ.
ಅಮ್ಮ ಅಮ್ಮ ಎನ್ನುವುದೆಂತಹ ಚೆಂದ ಆನಂದವು ಉಕ್ಕುವುದೆದೆಯಿಂದ ಇಬ್ಬರೂ ಕೂಡಿ ಆಟವನಾಡಿ ಈರ್ವರೂ ಕಲೆತು ನಕ್ಕು ನಲಿದು ಉತ್ತಪ್ಪಕ್ಕೆ ನೀ ತುಪ್ಪವ ಬೆರೆಸಿ ಊಟವ ಮಾಡಿಸೆ ಅದು ಬಲು ಸೊಗಸು ಋಷಿ ಮುನಿಗಳ ಕಥೆ ಹೇಳಲು ನೀನು ಅಕ್ಕರೆಯಿಂದ ಕೇಳುವೆ ನಾನು ಎಲ್ಲರ ಜೊತೆಯಲಿ ಒಳ್ಳೆಯ ಗೆಳೆತನ ಏತಕ ಎಂಬುದ ನೀ ತಿಳಿಸಿರುವೆ ಐಷಾರಾಮದ ಜೀವನಕಿಂತ ಒಬ್ಬರಿಗೊಬ್ಬರು ಸಹಕರಿಸುತ್ತ ಓರಗೆಯವರಿಗೂ ಗೌರವ ತೋರಿ ಔದಾರ್ಯದ ಗುಣ ಬೆಳೆಸಿರುವೆ ಅಂತಃಕರಣವ ಬೆಳಗಿಸುವೆ ಅಃ ಆಹಾ! ನನ್ನಮ್ಮ ನಿನಗಿಂತಲೂ ಮಿಗಿಲಾರಮ್ಮ?
©2024 Book Brahma Private Limited.