‘ಬೊಂಬಾಯಿ ಮಿಠಾಯಿ’ ಕವಿ, ಕತೆಗಾರ್ತಿ ವಿಶಾಲಾ ಆರಾಧ್ಯ ಅವರು ರಚಿಸಿರುವ ಮಕ್ಕಳ ಕವಿತೆಗಳೆಗಳ ಸಂಕಲನ. ಈ ಕೃತಿಗೆ ಡಾ. ಬೈರಮಂಗಲ ರಾಮೇಗೌಡ ಅವರು ಬೆನ್ನುಡಿ ಬರೆದು ‘ಸರಳ ಪ್ರಾಸ ಮತ್ತು ಲಯಗಳಿಂದ ಕೂಡಿದ ಮಾತುಗಳನ್ನು ಮಕ್ಕಳು ಬೆರಗಿನಿಂದ ಆಲಿಸುವುದು, ಅಂಥವುಗಳನ್ನು ಅನುಕರಣೆ ಮಾಡುವುದರಲ್ಲಿ ಸಂತೋಷವನ್ನು ಅನುಭವಿಸುವುದು, ಕಾವ್ಯಮಯವಾದ ಸಾಲುಗಳನ್ನು ಮಕ್ಕಳ ಬಹುಕಾಲದವರೆಗೆ ನೆನಪಿನಲ್ಲಿ ಉಳಿಸಿಕೊಳ್ಳುವುದು. ಇವೆಲ್ಲಾ ಮಕ್ಕಳ ಪದ್ಯಗಳನ್ನು ಬರೆಯಲು ವಿಶಾಲಾ ಅರಿಗೆ ಪ್ರೇರಣೆ ಒದಗಿಸಿರಬಹುದು. ಈ ಸಂಕಲನದ ಎಲ್ಲಾ ಪದ್ಯಗಳು ಶೀರ್ಘಿಕೆಯಂತೆ ಸವಿಯಾಗಿ ಕರಗುವ ಗುಣವನ್ನು ಹೊಂದಿರುವುದರಿಂದ ಮಕ್ಕಳನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ. ಈ ಸಂಕಲನದಲ್ಲಿ ಮುಂಜಾವು, ಈ ನಾಡು ನಮ್ಮದು, ಸುಮ ಬಾಲೆ, ನಮ್ಮ ಹಡೆದವ್ವ, ಆಶಾವಾದ, ನಾವು ಅಚಲರು, ಜ್ಞಾನಗಂಗಾ, ಗಿಳಿವಿಂಡು, ಕೋಗಿಲೆ, ತಾರೆಗಳ ತಾರೆ, ಪ್ರೀತಿಯ ಶಾಲೆ, ಟಾಮಿ ಮತ್ತು ನಾನು, ನನ್ನ ಹಕ್ಕಿ, ಮಿನುಗು ತಾರೆ, ನಾವು ಗೆಳೆಯರು, ಬುದ್ಧಿವಂತ ನರಿ(ಕಥಗವನ), ಚಿಗರೆ ಮರಿ, ರಜೆಯ ಮಜಾ, ನನ್ನಮ್ಮ, ಸಣ್ಣಿರುವೆ, ಪಾತರಗಿತ್ತಿ, ಅಆಇಈ ಅಕ್ಷರಮಾಲೆ, ನಾನು ಮತ್ತು ಜಿಮ್ಮಿ, ಅಮ್ಮನ ಸೀರೆ ಆಕಾಶ, ಬೊಂಬಾಯಿ ಮಿಠಾಯಿ, ಸುಳಿಗಾಳಿ, ಶಾಲೆ ಶುರು, ನನ್ನ ಪುಸ್ತಕ ಪ್ರೀತಿ, ತರಕಾರಿ ಅರಿ, ವಿನಂತಿ, ತಂದೆ-ತಾಯಿ ದೇವರು, ವರ್ಣಮಾಲೆ, ಪ್ರವಾಸ, ಮಗು-ನಗು, ಕ್ಕೊ ಕ್ಕೊ ಕೋಳಿ, ಕುಂಟುಬಿಲ್ಲೆ, ರಾಷ್ಟ್ರಪ್ರೇಮ, ನನ್ನ ನೆರಳು, ಅಮ್ಮನಿಗಿಷ್ಟ, ಹಾಗೂ ಈ ನಾಡು ಎಂಬ 40 ಕವನಗಳು ಸಂಕಲನಗೊಂಡಿವೆ.
©2024 Book Brahma Private Limited.