ಲೇಖಕಿ ಎಚ್. ಎಸ್. ಮುಕ್ತಾಯಕ್ಕ ಅವರ ಕೃತಿ ‘ಅವನು ಮಧು ಸಾವು’ ದ್ವಿಪದಿಗಳ ಸಂಗ್ರಹ. ‘ಅವನು ಬರುವನೆಂಬುದನ್ನೇ ನಾನು ನಂಬದೆ ಹೋದೆ ಬಾಗಿಲಲಿ ನಿಂತಾಗ ಬಾ ಎಂದು ಕರೆವುದ ಮರೆತುಬಿಟ್ಟೆ’, ‘ಬಟ್ಟಲಲ್ಲಿರುವಾಗ ಮದಿರೆ ಮುದ್ದೆಯಂತೆ ಇತ್ತು ಒಳಗೆ ಇಳಿದಾಗ ತುಂಟತನ ಆರಂಭಿಸಿತು.’ ‘ನಿನ್ನ ಬಾಹುಗಳಲಿ ನನ್ನನ್ನು ಕರಗಲು ಬಿಡು ಕರ್ಪೂರದಂತೆ ಕುರುಹು ಬಿಡದೆ ಉರಿದುಹೋಗುವೆ.’ ‘ದೀಪ ಎಂದೂ ಪತಂಗದ ಪರೀಕ್ಷೆ ಮಾಡುವುದಿಲ್ಲ ಆದರೂ ಪತಂಗದ ಅರ್ಪಣೆ ಏನದ್ಭುತ’, ‘ನಾನು ಸಾವಿನ ಮದ್ಯ ಕುಡಿದಿದ್ದೇನೆ ಅಂತೆ ಬದುಕು ನನಗೆ ಪ್ರಿಯವಾಗಿದೆ.’, ‘ದೀರ್ಘ ಪಯಣದ ದಾರಿ ದೀಪಗಳಿಲ್ಲದೆಯೆ ಸಾಗಿತು ಈಗ ಎಲ್ಲಾ ಮುಗಿದ ಮೇಲೆ ಇನ್ನೇನು ಬದುಕಿನ ಹಂಗು ಇಲ್ಲ’. ಇಂತಹ ಸಾಲುಗಳನ್ನೊಳಗೊಳಗಂಡ ದ್ವಿಪದಿಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ
©2025 Book Brahma Private Limited.