ಕವಿ ನಿರ್ಮಲಾ ಶೆಟ್ಟರ್ ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದವರು. ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. ಧಾರವಾಡದ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿಂದಿ ಭಾಷಾ ಶಿಕ್ಷಕಿಯಾಗಿದ್ದು, ಇವರಿಗೆ ತಾಲೂಕು ಹಾಗೂ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದೆ. .
ಕೃತಿಗಳು: ಬೆಳಕಿನೊಡನೆ ಪಯಣ (ಕವನ ಸಂಕಲನ), ನಿನ್ನ ಧ್ಯಾನಿಸಿದ ಮೇಲೂ (ಗಜಲ್ ಸಂಕಲನ), ‘ಸರಹದ್ದುಗಳಿಲ್ಲದ ಭೂಮಿಯ ಕನಸು (ಕವನ ಸಂಕಲನ). .
*ಆಕಾಶವಾಣಿಯಲ್ಲಿ ಕತೆ ಕವಿತೆ ವಾಚನ. 2020 ರಲ್ಲಿ ಪ್ರಜಾವಾಣಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ. ಅನುಪಮಾ ನಿರಂಜನ ಕಥಾ ಬಹುಮಾನ ಲಭಿಸಿದೆ.