ಮೌಲಾಲಿ ಕೆ. ಆಲಗೂರ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಬೋರಗಿ ಗ್ರಾಮದವರು. ತಂದೆ ಖತಾಲಸಾಬ ಹಾಗೂ ತಾಯಿ ಜೈನಾಬಿ. ಪ್ರಸ್ತುತ ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆ, ಆಡುಗೋಡಿ ಪೊಲೀಸ್ ಶ್ವಾನದಳದಲ್ಲಿ ಆರಕ್ಷಕ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಣ್ಣವಯಸ್ಸಿನಿಂದಲೇ ಸಾಹಿತ್ಯ ಅಭಿರುಚಿ ಬೆಳೆಸಿಕೊಂಡು, ವೃತ್ತಿಯ ಜೊತೆಗೆ ಸಾಹಿತ್ಯವನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಕನ್ನಡದ ಹೆಸರಾಂತ ದಿನಪತ್ರಿಕೆ, ಮಾಸ ಪತ್ರಿಕೆಗಳಲ್ಲಿ 150ಕ್ಕೂ ಅಧಿಕ ಲೇಖನ, ಅಂಕಣ, ಕವನ, ಶಿಶುಗೀತೆಗಳು, ಪ್ರೇಮಗೀತೆಗಳು ಪ್ರಕಟಗೊಂಡಿವೆ. ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ಸ್ನೇಹ, ಸೌಹಾರ್ದತೆ ಮೂಡಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಪೊಲೀಸರ ಅಭಯ, ಕೊರೊನಾ ಜಾಗೃತಿ ಗೀತೆ, ವಾಹನ ಸವಾರರಿಗೆ ಜಾಗೃತಿ ಮೂಡಿಸಲು ಸಂಚಾರಿ ನಿಯಮ ಪಾಲಿಸಿ, ಮಾದಕ ವಸ್ತುಗಳ ಸೇವನೆ ಅಪರಾಧ, ಪೊಲೀಸ್ ಶ್ವಾನದಳ ಜಾಗೃತಿ ಗೀತೆ ಸೇರಿದಂತೆ ಎಂಟು ಪೊಲೀಸ್ ಜಾಗೃತಿ ಗೀತೆಗಳನ್ನು ರಚಿಸಿದ್ದಾರೆ. ಕೃತಿಗಳು: ನಾ ಕಂಡ ಜಯ ಕವನ ಸಂಕಲನ (2012), ಆಗಸದ ತೇಜ ಆರೂಢ ಮಹಾರಾಜ್ (2015), ಭಾವ ಸ್ಪಂದನ