About the Author

ಮಕ್ಕಳ ಸಾಹಿತಿ ಕೆ. ಶಿವಲಿಂಗಪ್ಪ ಹಂದಿಹಾಳು ಅವರು ಬಳ್ಳಾರಿ ಜಿಲ್ಲೆಯ ಹಂದಿಹಾಳು ಗ್ರಾಮದವರು. ವಿದ್ಯಾಭ್ಯಾಸ ಎಂ.ಎ., ಬಿ.ಇಡಿ (ಪಿ.ಹೆಚ್.ಡಿ).,ಎನ್.ಇ.ಟಿ.(ಕನ್ನಡ) ಪದವೀಧರರು. ಪ್ರಸ್ತುತ ಸ. ಹಿ. ಪ್ರಾ. ಶಾಲೆ ಹಂದಿಹಾಳ ಗ್ರಾಮದ ಶಾಲೆಯಲ್ಲಿ ಸಹ ಶಿಕ್ಷಕರು. ಬಳಪ (ಮಕ್ಕಳ ಮಾಸ ಪತ್ರಿಕೆ) ಸ್ಥಾಪಕ ಸಂಪಾದಕರಾಗಿ, ಕನಕ ಅಧ್ಯಯನ ಸಂಶೋಧನಾ ಸಂಸ್ಥೆಯಿಂದ ಹೊರತರುತ್ತಿರುವ ತತ್ವಪದಗಳ ಸಂಪುಟ ಸಂಪಾದನಾ ಕಾರ್ಯದಲ್ಲಿ ಬಳ್ಳಾರಿ ಜಿಲ್ಲೆಯ ಕ್ಷೇತ್ರ ತಜ್ಞರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕೃತಿಗಳು: ನಾನು ಮತ್ತು ಕನ್ನಡಕ (ಕವನ ಸಂಕಲನ), ಎಳೆಬಿಸಿಲು (ಮಕ್ಕಳ ಸಾಹಿತ್ಯ ಸಂಪದ), ಶಾವೋಲಿನ್  (ಇಂಗ್ಲಿಷ್ ಮೂಲ ಮಕ್ಕಳ ಕತೆಗಳು), ಆನಂದಾವಲೋಕನ (ಭಾರತೀಯ ಮಕ್ಕಳ ಸಾಹಿತ್ಯ ಕುರಿತು), ಬಳ್ಳಾರಿಯ ಬೆಡಗು (ಪ್ರಾತಿನಿಧಿಕ ಕತಾ ಸಂಕಲನ), ದಿ ಯಂಗ್ ಸೈಂಟಿಸ್ಟ್, (ಮಕ್ಕಳ ಕಾದಂಬರಿ) ಕೃತಿಗಳನ್ನು ರಚಿಸಿದ್ದಾರೆ. 

ಪ್ರಶಸ್ತಿ-ಪುರಸ್ಕಾರಗಳು: ಅವರ  ಶಾವೋಲಿನ್ ಕೃತಿಗೆ ಜಿ.ಬಿ.ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ‘ನಾನು ಮತ್ತು ಕನ್ನಡಕ’ ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಧನ ಸಹಾಯ (2010), ಕರವೇ ನಲ್ನುಡಿ ಕತಾ ಪ್ರಶಸ್ತಿ (2012), ಆಜೂರು ಪ್ರತಿಷ್ಠಾನ ಪ್ರಶಸ್ತಿ (2017), ಅಷ್ಠ ದಿಗ್ಗಜ ಪ್ರಶಸ್ತಿ (2017), ಹೈದರಾಬಾದಿನ ಗುತ್ತಿ ನಾರಾಯಣರೆಡ್ಡಿ ತೆಲುಗು ಪೀಠಂ ವತಿಯಿಂದ, ಮಕ್ಕಳ ಸಾಹಿತ್ಯ ಕ್ಷೇತ್ರದ ಸೇವೆಗಾಗಿ ‘ರಾಜ್ಯ ಮಟ್ಟದ ಸಾಹಿತ್ಯ ಸಿರಿ ಪ್ರಶಸ್ತಿ’ 2020, ಶ್ರೀ ಕೃಷ್ಣ ದೇವರಾಯ ವಂಶಸ್ಥರಿಂದ ಕೊಡಲ್ಪಟ್ಟ ರಾಷ್ಟ್ರೀಯ ಪ್ರಶಸ್ತಿ ಲಭಿಸಿವೆ.

ಕೆ. ಶಿವಲಿಂಗಪ್ಪ ಹಂದಿಹಾಳು

(01 Jun 1983)

BY THE AUTHOR