ರಾಮು ಎನ್ ರಾಠೋಡ್ ಮಸ್ಕಿ ಅವರು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಬಿ.ಎಸ್. ಸಿ ಪದವೀಧರರು. ಇವರು ಕೆಪಿಟಿಸಿಎಲ್ ಇಲಾಖೆ ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಚಿಕ್ಕ ವಯಸ್ಸಿನಿಂದಲೂ ಸಾಹಿತ್ಯ ಬರವಣಿಗೆ ಎಂದರೆ ಆಸಕ್ತಿ ಹೆಚ್ಚು. ಇವರು ಸಾಹಿತಿಗಳು ಮತ್ತು ಅಷ್ಟೇ ಉತ್ತಮ ಸಂಘಟನೆಕಾರರು ಹೌದು. ಇವರು ಕವಿವೃಕ್ಷ ಬಳಗ ರಾಯಚೂರು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರು. ಬಂಜಾರ ಭಾಷ ಸಾಹಿತ್ಯರ್ ವೇಲ್ ವೇಲ್ಡಿ ಸಂಘಟನೆಯ ರಾಜ್ಯ ಸಂಚಾಲಕರು ಮತ್ತು ಗೋರ್ ಬೋಲಿ ಸಾಹಿತ್ಯ ಪ್ರಕಾಶನದ ಮಾಲಿಕರಾಗಿ ಸಾಹಿತ್ಯ ಸೇವೆ ಮಾಡುತ್ತಿದ್ದಾರೆ.
ಅಶ್ವಿನಿ ಅಮಲುಗಳು ಕವನ ಸಂಕಲನ 2018, ಭಾವನೆಗಳ ಸಿಂಚನ ಸಂಪಾದಿತ ಕವನ ಸಂಕಲನ 2018, ಕವಿವೃಕ್ಷ ಕಥಾ ಮಾಲಿಕೆ ಸಂಪಾದಿತ ಕಥಾ ಸಂಕಲನ 2019, ಕನ್ನಡ ಕಾವ್ಯ ವೈಭವ ಸಂಪಾದಿತ ಕಾವ್ಯ ಸ್ಪಂದನ 2019, ಹೆಜ್ಜೆ ಗುರುತಿನ ಸಾಲು ಕವನ ಸಂಕಲನ 2020, ಹೊಂಗೆ ನೆರಳು ಸಂಪಾದಿತ ಗಜಲ್ ಸಂಕಲನ 2021, ಗೋರ್ ವಟ್ ಬಂಜಾರ ಭಾಷೆ ಕೃತಿ 2021 ಇವು ಇವರ ಪ್ರಕಟಿತ ಕೃತಿಗಳು.