‘ಸಂಕಷ್ಟದಲ್ಲಿ ಮೇಟಿ ವಿದ್ಯೆ’ ಕೃತಿಯು ಮಾಧವ ಐತಾಳ್ ಅವರ ಕೃಷಿ ಕುರಿತ ಬರಹಗಳ ಸಂಕಲನವಾಗಿದೆ. ಸಾಲದ ಹೊರೆಯಿಂದ ಬಾಧೆಪಡುವ ರೈತನ ಆರ್ಥಿಕ ದೌರ್ಬಲ್ಯವನ್ನು ಮುಂದುಮಾಡಿ ಆತನ ಭೂಮಿ ಕಬಳಿಸಿ ವಿದೇಶಿಯರಿಗೆ ಗುತ್ತಿಗೆ ನೀಡುತ್ತಿದೆ. ನಮ್ಮ ದೇಶದಲ್ಲಿ ಕೃಷಿಗೆ ಪ್ರಥಮಾದ್ಯತೆ ಇಲ್ಲ, ಆಹಾರೋತ್ಪಾದನೆ ನೆಲಕಚ್ಚಿದೆ. ಸ್ವಾಭಿಮಾನಿ ರೈತರಿಗೆ ನೇಣು ಕುಣಿಕೆಯಲ್ಲದೆ ಬೇರೇನೂ ಕಾಣುತ್ತಿಲ್ಲ. ''ಈ ರೈತರಿಗೆ ನೀರು, ವಿದ್ಯುತ್, ಬೀಜ, ರಸಗೊಬ್ಬರ, ಕೀಟನಾಶಕ ಒದಗಿಸಲು ಮಾಡುವ ಖರ್ಚಿನ ಅರ್ಧದಷ್ಟು ವಿದೇಶಗಳಿಂದ ಧಾನ್ಯ ಖರೀದಿಸಲು ಸಾಕು'' ಎಂದೊಬ್ಬ ಮಂತ್ರಿ ಹೇಳಿದ್ದನಂತೆ ! ಇದುವರೆಗೆ ಅವಲ೦ಬಿಸಿದ್ದ ಸಾಂಪ್ರದಾಯಿಕ ಕೃಷಿ ವಿಧಾನ ಕಣ್ಮರೆಯಾಗಿ ಹೊಸ ಹೊಸ ತಂತ್ರಜ್ಞಾನ ಆಧಾರಿತ ಕೃಷಿ ಎಲ್ಲೆಡೆ ಕಾಲಿಟ್ಟಿದೆ. ಆದು ಉತ್ಪಾದಿಸುವ ಆಹಾರ ದುಬಾರಿ, ನೆಲ ಜಲ ವಾಯು ಕಲುಷಿತಗೊಂಡು ಬದಲಾವಣೆಗೊಂಡ ಹವಾಮಾನ ಅತಿವೃಷ್ಟಿ, ಅನಾವೃಷ್ಟಿ ಎರಡೂ ರೈತನಿಗೆ ಮಾರಕ. ಕೃಷಿಕರು ಕಂಗಾಲಾಗಿದ್ದಾರೆ ಎನ್ನುತ್ತದೆ ಈ ಕೃತಿ.
(ಹೊಸತು, ಜುಲೈ 2012, ಪುಸ್ತಕದ ಪರಿಚಯ)
ರೈತ ದೇಶದ ಬೆನ್ನೆಲು, ಅನ್ನದಾತ ಎಂದೆಲ್ಲ ಹಾಡಿ ಹೂಗಳಿದ್ದಾರೆ. ಕೃಷಿ ಭೂಮಿಯಲ್ಲಿ ಆಹಾರ ಬೆಳೆಸಲು ಆತನಿಗೆ ಅನುಕೂಲ ಮಾಡಿಕೊಡುವ ಬದಲು ಜಾಗತಿಕ ಹಣವಂತರನ್ನು ಆಹ್ವಾನಿಸಿ ಹಣ ಬೆಳೆಸುವ ದಂಧೆಗೆ ಸರ್ಕಾರದ ಪ್ರೋತ್ಸಾಹ, ಸಾಲದ ಹೊರೆಯಿಂದ ಬಾಧೆಪಡುವ ರೈತನ ಆರ್ಥಿಕ ದೌರ್ಬಲ್ಯವನ್ನು ಮುಂದುಮಾಡಿ ಆತನ ಭೂಮಿ ಕಬಳಿಸಿ ವಿದೇಶಿಯರಿಗೆ ಗುತ್ತಿಗೆ ನೀಡುತ್ತಿದೆ. ನಮ್ಮ ದೇಶದಲ್ಲಿ ಕೃಷಿಗೆ ಪ್ರಥಮಾದ್ಯತೆ ಇಲ್ಲ, ಆಹಾರೋತ್ಪಾದನೆ ನೆಲಕಚ್ಚಿದೆ. ಸ್ವಾಭಿಮಾನಿ ರೈತರಿಗೆ ನೇಣು ಕುಣಿಕೆಯಲ್ಲದೆ ಬೇರೇನೂ ಕಾಣುತ್ತಿಲ್ಲ. ''ಈ ರೈತರಿಗೆ ನೀರು, ವಿದ್ಯುತ್, ಬೀಜ, ರಸಗೊಬ್ಬರ, ಕೀಟನಾಶಕ ಒದಗಿಸಲು ಮಾಡುವ ಖರ್ಚಿನ ಅರ್ಧದಷ್ಟು ವಿದೇಶಗಳಿಂದ ಧಾನ್ಯ ಖರೀದಿಸಲು ಸಾಕು'' ಎಂದೊಬ್ಬ ಮಂತ್ರಿ ಹೇಳಿದ್ದನಂತೆ ! ಇದುವರೆಗೆ ಅವಲ೦ಬಿಸಿದ್ದ ಸಾಂಪ್ರದಾಯಿಕ ಕೃಷಿ ವಿಧಾನ ಕಣ್ಮರೆಯಾಗಿ ಹೊಸ ಹೊಸ ತಂತ್ರಜ್ಞಾನ ಆಧಾರಿತ ಕೃಷಿ ಎಲ್ಲೆಡೆ ಕಾಲಿಟ್ಟಿದೆ. ಆದು ಉತ್ಪಾದಿಸುವ ಆಹಾರ ದುಬಾರಿ, ನೆಲ ಜಲ ವಾಯು ಕಲುಷಿತಗೊಂಡು ಬದಲಾವಣೆಗೊಂಡ ಹವಾಮಾನ ಅತಿವೃಷ್ಟಿ, ಅನಾವೃಷ್ಟಿ ಎರಡೂ ರೈತನಿಗೆ ಮಾರಕ. ಕೃಷಿಕರು ಕಂಗಾಲಾಗಿದ್ದಾರೆ. ಇವಿಷ್ಟು ಈ ಪುಸ್ತಕದಲ್ಲಿನ ಓದಿಗೆ ಪೂರಕ. ಇನ್ನುಳಿದಂತೆ ಕೃಷಿ ಉತ್ಪನ್ನದ ರಫ್ತು - ಆಮದು, ಬ್ಯಾಂಕುಗಳು ಕೃಷಿಕನಿಗೆ ನೀಡುವ ಸಾಲ, ಶ್ರೀಮಂತ ಕೃಷಿಕರಿಗೆ ಅನುಕೂಲವಾಗುವ ಯೋಜನೆ ಇವೆಲ್ಲ ಚರ್ಚಿಸಲ್ಪಟ್ಟಿವೆ.
©2024 Book Brahma Private Limited.