ಲೇಖಕ ಜಯಪ್ರಸಾದ್ ಬಳ್ಳೇಕೆರೆ ಅವರು ರಚಿಸಿದ ಕೃತಿ-A ಟು- Z ಸಾವಯವ. ಸಾವಯವ ಕೃಷಿ ಅನುಷ್ಟಾನಕ್ಕಾಗಿ ಸಮಗ್ರ ಮಾಹಿತಿ ಎಂಬುದು ಈ ಕೃತಿಗೆ ನೀಡಿರುವ ಉಪಶೀರ್ಷಿಕೆ. ಮಣ್ಣಿನ ಆರೋಗ್ಯ ಕಾಯ್ದುಕೊಳ್ಳುವುದೂ ಸೇರಿದಂತೆ ಸಾಂಪ್ರದಾಯಿಕ ಕೃಷಿಯ ಮಹತ್ವವನ್ನು, ಅದರ ಅಳವಡಿಕೆಯ ವಿಧಾನವನ್ನು ತಿಳಿಸುವುದು ಮಾತ್ರವಲ್ಲ; ರಾಸಾಯನಿಕ, ಸಾವಯವ ಹಾಗೂ ಸಹಜ ಕೃಷಿ- ಈ ಎಲ್ಲದರ ವ್ಯತ್ಯಾಸವನ್ನು ಮನದಟ್ಟು ಮಾಡುವ ಕೃತಿ. ಗಿಡಮೂಲಿಕೆ ಹಾಗೂ ಸಸ್ಯಗಳನ್ನು ಬೆಳೆಸಿ, ಅವುಗಳಿಂದ ಕೀಟನಾಶಕಗಳನ್ನು ಹೇಗೆ ತಯಾರಿಸಬಹುದೆಂಬ ಮತ್ತು, ಎಷ್ಟು ಸಾಧ್ಯವೋ ಅಷ್ಟು ರೈತ ಸ್ವತಂತ್ರನಾಗಿರಬೇಕು ಎಂಬುದರ ಸಮಗ್ರ ಮಾಹಿತಿ ನೀಡುತ್ತದೆ. ಹೆಚ್ಚಿನ ಇಳುವರಿ, ನೀರಿನ ಪರಿಣಾಮಕಾರಿ ಬಳಕೆ., ಕಡಿಮೆ ವೆಚ್ಚದ ಕೃಷಿ, ಬರ, ವಿದ್ಯುತ್ ವ್ಯತ್ಯಯ ಹೀಗೆ ಯಾವುದೇ ಸಮಸ್ಯೆ ಇದ್ದರೂ ಅವುಗಳ ನಿರ್ವಹಣೆ ಜಾಣ್ಮೆಯನ್ನೂ ಸಹ ಈ ಕೃತಿಯಲ್ಲಿ ಕಾಣಬಹುದು.
©2024 Book Brahma Private Limited.