ಹೈನುಗಾರಿಕಾ ತರಬೇತಿ ಸಂಸ್ಥೆಗಳು, ಮೇವಿನ ಬೆಳೆಗಳು ಹೀಗೆ ಹಲವೊಂದು ಉಪಯುಕ್ತ ವಿಷಯಗಳ ಬಗ್ಗೆ ಈ ಪುಸ್ತಕದಲ್ಲಿ ಮಾಹಿತಿಯಿದೆ. ಲೇಖಕರು ಮಾಹಿತಿ ನೀಡುವಾಗ ಮಲೆನಾಡಿನ ರೈತರನ್ನು ಗಮನದಲ್ಲಿಟ್ಟುಕೊಂಡಿದ್ದಾರೆ ಎನಿಸಿದರೂ ಹೈನುಗಾರರೆಲ್ಲರಿಗೂ ಅವಶ್ಯಕ ಮಾಹಿತಿ ಪುಸ್ತಕದಲ್ಲಿದೆ. ಆಧುನಿಕ ಹೈನುಗಾರಿಕೆಗೆ ಹೆಮ್ಮಾರಿಯಾಗಿರುವ ಸಮಸ್ಯೆಗಳ ಬಗ್ಗೆ 'ನನ್ನ ಹಸು ಗೆದ್ದಾನೆ ಆಗಿಲ್ಲ. 'ಸೈಲಾಬಾ ಮತ್ತು 'ಹಾಲಿಗೆ ಡಿಗ್ರಿಯೇ ಬರ್ತಾ ಇಲ್ಲʼ ಇತ್ಯಾದಿ ಅಧ್ಯಾಯಗಳಲ್ಲಿ ಸೂಕ್ತ ವೈಜ್ಞಾನಿಕ ಮತ್ತು ನಿವಾರಣೆ ಬಗ್ಗೆ ಚರ್ಚಿಸಲಾಗಿದೆ. ಅಷ್ಟೇ ಅಲ್ಲ ಶಿರೋನಾಮೆಯ ಹೇಳುತ್ತದೆ, ರೈತರ ಭಾಷೆಯಲ್ಲಿಯೇ ಅವರ ದೈನಂದಿನ ಸಮಸ್ಯೆಗಳನ್ನು ಅರ್ಹ ಮಾಡಿಕೊಂಡಿರುವ ರೀತಿ, ಪುಸ್ತಕದಲ್ಲಿನ ಭಾಷೆ ಮತ್ತು ಶೈಲಿ ಸಹ ಅಭಿನಂದನೀಯ ಒಟ್ಟಾರೆ ಹೇಳುವುದಾದರೆ, ಹೈನುಗಾರರಿಗೆ ಇಂತಹ ಒಂದು ಪುಸ್ತಕದ ಅವಶ್ಯಕತೆ ಇತ್ತು ಮತ್ತು ನನ್ನ ಯುವ ಮಿತ್ತರು ಅದನ್ನು ಪೂರೈಸಿದ್ದಾರೆ. ಇದೇ ರೀತಿ ಅವರ ಬರವಣಿಗೆ ಮುಂದುವರೆಯಲಿ ಮತ್ತು ಪಶುಪಾಲನೆಗೆ ಸೋಬಂಧಿತ ಪುಸ್ತಕ ಗಳು ಹೆಚ್ಚು ಹೆಚ್ಚಾಗಿ ಪ್ರಕಟವಾಗಲಿ, ಹೊಸ ಹೊಸ ಬರಹಗಾರರು ಪಶುಪಾಲನಾ ವಿಜ್ಞಾನ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಲು ಈ ಪ್ರಸ್ತಕ ಸ್ಫೂರ್ತಿ ನೀಡಲಿ, ಹಾಲಿನ ಸೊಸೈಟಿಗಳಲ್ಲಿ ಇಂತಹ ಪುಸ್ತಕಗಳಿರುವ ಪುಟ್ಟ ಗ್ರಂಥಾಲಯ ಸ್ಥಾಪನೆಯಾಗಲಿ ಎಂದು ಟಿ. ಎಸ್. ರಮಾನಂದ ಪುಸ್ತಕದ ಮುನ್ನಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.