ಕೃಷಿ ಸಂಸ್ಕೃತ ಕಥನ ಲೇಖಕರಾದ ಚಿನ್ನಸ್ವಾಮಿ ವಡ್ಡಗೆರೆ ಅವರ ಕೃತಿ. ದೇಸಿ ಕೃಷಿ ಪರಂಪರೆಯನ್ನು ಪರಿಚಯಿಸಿಕೊಡುವ ಈ ಕೃತಿಯಲ್ಲಿ ಕೃಷಿ ಕಥನ,ಸಾಹಿತ್ಯ ಕಥನ ಮತ್ತು ಪ್ರವಾಸ ಕಥನ ಎಂಬ ಮೂರು ಭಾಗಗಳಿವೆ.
ಹೊಸ ತಲೆಮಾರಿನ ಬಹುತೇಕ ಕೃಷಿಕರಿಗೆ ಸಾಂಪ್ರದಾಯಿಕ ಕೃಷಿಯ ಬಗ್ಗೆ ಮತ್ತು ಆಧುನಿಕ ಶಿಕ್ಷಣದ ಬೆನ್ನುಹತ್ತಿ ಕೃಷಿ ಪರಂಪರೆಯನ್ನು ಮರೆತು ಹಸಿರು ಕ್ರಾಂತಿಯ ಸುಳಿಗೆ ಸಿಲುಕಿ ನಲುಗಿ ಹೋಗಿರುವ ಬಗ್ಗೆ ಈ ಕೃತಿ ಪರಿಚಯಿಸುತ್ತದೆ. ದೇಸಿಕೃಷಿ ಪರಂಪರೆಯನ್ನು ನೆನಪಿಸಲು ಸಾವಯವ,ನೈಸರ್ಗಿಕ,ಸಹಜ ಕೃಷಿಯ ಕಡೆಗೆ ಯುವಜನಾಂಗದ ಗಮನಸೆಳೆಯುವಂತಹ ಒಂದಷ್ಟು ಪುಸ್ತಕಗಳನ್ನು ಪರಿಚಯಿಸುವ ಪ್ರಯತ್ನ ಈ ಪುಸ್ತಕ.
©2025 Book Brahma Private Limited.