ನೀರಿನ ಪ್ರಮುಖ ಮೂಲಗಳಲ್ಲಿ ಅಂತರ್ಜಲವು ಒಂದು. ಮಾನವನ ದುರಾಸೆಗೆ ಅಂತರ್ಜಲವು ಬತ್ತಿಹೋಗುತ್ತಿದೆ. ಸಾವಿರಾರು ಅಡಿಗಳಷ್ಟು ಆಳಕ್ಕೆ ಹೋದರೂ ನೀರು ಸಿಗದ ಪರಿಸ್ಥಿತಿ ಎಲ್ಲೆಡೆ ಮಾರ್ಪಟ್ಟಿದೆ. ಈ ಕೃತಿಯು ಸಮೃದ್ಧ ಜಲ ಸಂಪನ್ಮೂಲದ ಮಾಹಿತಿ ನೀಡುತ್ತದೆ. ಆದರೂ ಅಭಾವ, ಕೃಷಿಯಲ್ಲಿ ಅಂತರ್ಜಲ ಬಳಕೆಯ ಮಹತ್ವ, ಅಂತರ್ಜಲದ ಸ್ವರೂಪ, ಅಂತರ್ಜಲ ಶೋಧ, ನೀರಿನ ಅಳತೆ, ಕೊಳವೆ ಬಾವಿ ಕೊರೆಸಿ ಬಳಕೆಯಲ್ಲಿ ತರುವುದು, ಅಂತರ್ಜಲದ ಬೆಲೆ, ಸೂಕ್ತ ಪಂಪ್ ಮತ್ತು ಮೋಟಾರ್ ಆಯ್ಕೆ, ಶಕ್ತಿಯ ಮಿತಬಳಕೆ ಮರು ಸೌರಶಕ್ತಿಯ ಬಳಕೆ, ಅಂತರ್ಜಲ ಸಾಗಾಣಿಕೆಗೆ ಕೊಳವೆ ಮಾರ್ಗ, ನೀರು ಮತ್ತು ಮಣ್ಣಿನ ಗುಣಮಟ್ಟದ ಪರಿಗಣನೆ, ಕೊಳವೆ ಬಾವಿ ನೀರಾವರಿ ವ್ಯವಸ್ಥೆಯ ವಿನ್ಯಾಸ, ಅಂತರ್ಜಲ ಬಳಕೆಗೆ ವಿವಿಧ ನೀರಾವರಿ ವಿಧಾನಗಳು, ಅಂತರ್ಜಲ ಬಳಕೆಯಲ್ಲಿನ ಸಮಸ್ಯೆಗಳು ಮರು ಪರಿಹಾರೋಪಾಯಗಳು, ಮಣ್ಣು, ನೀರು, ಸಸ್ಯ, ವಾತಾವರಣಗಳ ಮಧ್ಯದ ಮೂಲಭೂತ ಸಂಬಂಧಗಳು, ಬೆಳೆಗಳ ನೀರಾವರಿ ನೀರಿನ ಬೇಡಿಕೆ, ಅತಿ ನೀರಾವರಿಯ ಆಪತ್ತುಗಳು ಮುಂತಾದ ವಿಷಯಗಳ ಬಗ್ಗೆ ಚರ್ಚಿಸುತ್ತದೆ.
©2024 Book Brahma Private Limited.