ಮಲೆನಾಡಿನ ಕೆಲ ಭಾಗಗಳಲ್ಲಿ (ಮುಖ್ಯವಾಗಿ ಶಿರಸಿ, ಸಿದ್ದಾಪುರ, ಯಲ್ಲಾಪುರ, ಸಾಗರ ತಾಲೂಕುಗಳು) ಅಡಿಕೆ ಸಂಸ್ಕರಣೆ ವೇಳೆ ಸಹಜವಾಗಿ ಉತ್ಪಾದನೆಯಾಗುವ ದ್ರವರೂಪದ ಪದಾರ್ಥವಿದು. ಬಿಸಿಲಿಗಿಟ್ಟು ಒಣಗಿಸಿದಾಗ ಮಂದರೂಪಕ್ಕೆ ಬರುತ್ತದೆ. ಗಾಢ ಕಂದು ಬಣ್ಣ. ಚೊಗರನ್ನು ಪುಡಿರೂಪಕ್ಕೆ ಪರಿವರ್ತಿಸುವುದರಿಂದ ಅದರ ದಾಸ್ತಾನು, ಸಾಗಾಟಕ್ಕೆ ಬೇಯಿಸಿ ಒಣಗಿಸಿದ ಅಡಿಕೆಗೆ ಬಣ್ಣ ಲೇಪನಕ್ಕೆ ಚೊಗರು ಪ್ರಧಾನವಾಗಿ ಬಳಕೆಯಾಗುತ್ತದೆ. ನಮ್ಮ ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಟ್ಟೆಗೆ ನೈಸರ್ಗಿಕ ಬಣ್ಣವಾಗಿ ಸಣ್ಣ ಪ್ರಮಾಣದಲ್ಲಿ ಚೊಗರು ಬಳಕೆಯಾಗುತ್ತಿದೆ. ಇತರ ಅನೇಕ ಸಾಧ್ಯತೆಗಳು ಈಗ ತೆರೆದುಕೊಳ್ಳುತ್ತಿವೆ. ಕರ್ನಾಟಕದಲ್ಲಿ ವಾರ್ಷಿಕ ಸುಮಾರು ಒಂದು ಲಕ್ಷ ಲೀಟರಿನಷ್ಟು ತೊಗರು ಉತ್ಪಾದನೆಯಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಅಗತ್ಯಬಿದ್ದರೆ ಇದನ್ನು ಮೂರು ಪಟ್ಟು ಹೆಚ್ಚಿಸಬಹುದಾಗಿದೆ. ಇತ್ತೀಚೆಗೆ ಅಡಿಕೆಯ ಸಂಸ್ಕರಣಾ ಮಿಲ್‌ಗಳು ಅಲ್ಲಲ್ಲಿ ಪ್ರಾರಂಭವಾಗುತ್ತಿವೆ. ಹಸಿ ಅಡಿಕೆಯನ್ನು ಸುಲಿದು ಬೇಯಿಸಿಕೊಡುವುದು ಇವುಗಳ ಕೆಲಸ. ಇಂತಹ ಮಿಲ್‌ಗಳಲ್ಲಿ ಒಂದೇ ಕಡೆ ಹೆಚ್ಚು ತೊಗರು ಸಂಗ್ರಹವಾಗುವ ಸಾಧ್ಯತೆ ಇದೆ. ಅಡಿಕೆ ಜೊಗರಿಗೆ ಉತ್ತಮ ಅವಕಾಶಗಳಿರುವ ಬಗ್ಗೆ ಅನುಮಾನ ಬೇಡ. ನಾವು ತೆರೆಸರಿಸಿ ತೋರಿಸಿದ್ದೇವೆ. ಇದರ ಔದ್ಯಮಿಕ ಬಳಕೆ ಬಟ್ಟೆ ಬಣ್ಣವಾಗಿ ಮಾತ್ರವಲ್ಲ, ಇನ್ನೂ ಹಲವು ದಿಸೆಗಳಲ್ಲಿ ಸಾಧ್ಯ ಗೆದ್ದಲು ನಿಯಂತ್ರಣ, ಕೀಟನಾಶಕ ಗುಣ, ಶಿಲೀಂದ್ರನಾಶಕ ಸಾಮರ್ಥ್ಯ, ಫೈವುಡ್ ಅಂಟು, ವಾರ್ನಿಶ್ ಇತ್ಯಾದಿ. ತೊಗರಿನಲ್ಲಿ ಅದೆಷ್ಟೇ ಗುಣಗಳಿದ್ದರೂ ಅದು ವ್ಯಾಪಕ ಬಳಕೆಗೆ ಬರಬೇಕಾದರೆ, ಆ ಬಗ್ಗೆ ಆಳ ಸಂಶೋಧನೆ ನಡೆಯಬೇಕು. ಉತ್ಪನ್ನ ಸ್ಟಾಂಡರ್ಡೈಸ್ ಆಗಬೇಕು. ಇದರ ತಯಾರಿ ಮತ್ತು ನಂತರದ ಪ್ರಕ್ರಿಯೆ ಶಿಸ್ತುಬದ್ಧ ಮತ್ತು ಸಂಘಟಿತವಾಗಬೇಕು, ಗುರಿ ತಲುಪಲು ದೂರ, ಬಹುದೂರ ಸಾಗಬೇಕು. - ಶ್ರೀ ಪಡ್ರೆ
©2024 Book Brahma Private Limited.