ಸುಸ್ಥಿರ ಕೃಷಿಗೆ ಹತ್ತಾರು ಹಾದಿ ಗಣೇಶ ಎಂ. ನೀಲೇಸರ ಅವರ ಕೃತಿಯಾಗಿದೆ. ಕೃಷಿಗೀಗ ಇಳಿಗಾಲ, ಕೃಷಿಕರಿಗೆ ಭವಿಷ್ಯವಿಲ್ಲ ಎಂಬ ಭಾವನೆ ದಟ್ಟವಾಗುತ್ತಿರುವ ಸದ್ಯದ ಸಂದರ್ಭದಲ್ಲಿ ಬೆಂಗಳಿ ಕುಟುಂಬ ಸಾಗುತ್ತಿರುವಂತಹ ಸ್ವಾವಲಂಬನೆಯ ಕಾಲುದಾರಿಗಳ ಮೂಲಕ ಸುಸ್ಥಿರತೆಯ ಹೆದ್ದಾರಿ ಕಟ್ಟಬೇಕಾಗಿದೆ. ಕೃಷಿ ಮಾಧ್ಯಮ ಕೇಂದ್ರ ಇದುವರೆಗೆ ಇಂತಹ ವಿವಿಧ ಯಶಸ್ಸಿನ ಕಥೆಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಿದೆ. ಬೆಂಗಳಿ ಕುಟುಂಬದ ಕೃಷಿ ಪ್ರಯತ್ನಗಳನ್ನು ಕಾಮ್ ಫೆಲೋ ಡಾ. ಗಣೇಶ ಎಂ. ನೀಲೇಸರ ಅವರು ವಿಸ್ಕೃತವಾಗಿ ದಾಖಲಿಸಿದ್ದಾರೆ. ಅವರಿಗೆ ಅಭಿನಂದನೆಗಳು. ಇನ್ನೊಂದಷ್ಟು ಜನರಿಗೆ ಕೃಷಿಯಲ್ಲಿ ತೊಡಗಿಸಿಕೊಳ್ಳಲು, ಈ ಕೃತಿ ಹುರುಪಿನೊಡನೆ ಮುಂದುವರಿಯಲು ಮಾನಸಿಕ ಧೈರ್ಯ ನೀಡಬಹುದು ಎಂದು ಅನಿತಾ ಪೈಲೂರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.