ಸುಸ್ಥಿರತೆಯೆಡೆಗೆ.... ಸುಜೀವನ ಪಯಣ

Author : ಮಲ್ಲಿಕಾರ್ಜುನ ಹೊಸಪಾಳ್ಯ

Pages 113

₹ 120.00




Year of Publication: 2015
Published by: ಐಡಿಎಫ್‌ಸಿ ಜೀವನ ಒಕ್ಕೂಟ
Address: ಕುಣಿಗಲ್

Synopsys

ಸುಸ್ಥಿರತೆಯ ಬದುಕಿಗೆ ಸುಸ್ಥಿರ ಕೃಷಿಯು ಹೇಗೆ ಕಾರಣ ಎಂಬುದನ್ನು ಸುಸ್ಥಿರತೆಯೆಡೆಗೆ ಸುಜೀವನ ಪಯಣ ಕೃತಿ ವಿವರಿಸುತ್ತದೆ. ಕೃಷಿಯ ಧನಾತ್ಮಕ ಅಂಶಗಳು ಕೃಷಿಯನ್ನು ಕೈಗೊಳ್ಳಲು ಪ್ರೇರೇಪಿಸುತ್ತವೆ. ಕೃಷಿ ಮಾಡುವ ಆಸಕ್ತರಿಗೆ ಈ ಕೃತಿಯು ಹತ್ತು ಹಲವು ಒಳನೋಟಗಳನ್ನು ನೀಡುತ್ತದೆ. 2009ರಲ್ಲಿ ಐಡಿಎಫ್ ಸಂಸ್ಥೆಯು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ತನ್ನ ಸೇವೆ ಆರಂಭಿಸಿತು. ನಂತರ 2010ರಲ್ಲಿ ಐಡಿಎಫ್ ಪ್ರೇರಣೆಯಿಂದ ಐಡಿಎಫ್ ಸುಜೀವನ ಒಕ್ಕೂಟ ಎಂಬ ಸಂಸ್ಥೆ ಸ್ಥಾಪನೆಗೊಂಡು ಐಡಿಎಫ್ ಧ್ಯೇಯಗಳನ್ನು ಮುಂದುವರಿಸಿತು. ಈ ಒಕ್ಕೂಟದ ಸಾಧನೆಯ ಹಾದಿಯನ್ನೇ ಈ ಕೃತಿಯಲ್ಲಿ ದಾಖಲಿಸಲಾಗಿದೆ. 

 

 

About the Author

ಮಲ್ಲಿಕಾರ್ಜುನ ಹೊಸಪಾಳ್ಯ

ಲೇಖಕ ಮಲ್ಲಿಕಾರ್ಜುನ ಹೊಸಪಾಳ್ಯ ಅವರ ಹುಟ್ಟೂರು ತುಮಕೂರು ಜಿಲ್ಲೆಯ ಹೊಸಪಾಳ್ಯ. ಮಧುಗಿರಿ, ತುಮಕೂರು, ಬೆಂಗಳೂರು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಅವರು ಅರ್ಥಶಾಸ್ತ್ರ ಹಾಗೂ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ್ಯಾಂಕ್ ನೊಂದಿಗೆ ಎರಡು ಚಿನ್ನದ ಪದಕ ಮತ್ತು ಪದವಿಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚಿನ ಅಂಕಗಳಿಕೆಗಾಗಿ ಚಿನ್ನದ ಪದಕ ಪಡೆದಿದ್ದಾರೆ.  ದೇಸಿ ತಳಿ, ನಾಟಿ ಬೀಜಗಳ ಸಂರಕ್ಷಣೆ ಕುರಿತು ವಿಶೇಷ ಆಸಕ್ತಿ, ಜಲಸಂರಕ್ಷಣೆ, ಸುಸ್ಥಿರ ಕೃಷಿ, ಸಿರಿಧಾನ್ಯ ಚಟುವಟಿಕೆಗಳಿಗೆ ಬೆಂಬಲ. ಜಲಜಾಗೃತಿಗಾಗಿ ಕಾರ್ಯಕ್ರಮ ಸಂಘಟನೆ. ಪಾರಂಪರಿಕ ...

READ MORE

Related Books