ಶೇಕಡ 60ಕ್ಕೂ ಹೆಚ್ಚು ಮರುಭೂಮಿಯ ಪ್ರದೇಶವನ್ನು ಹೊಂದಿರುವ, ಅತ್ಯಂತ ಕಡಿಮೆ ಪ್ರಮಾಣದ ಮಳೆ ಬೀಳುತ್ತಿರುವ ಇಸ್ರೇಲ್ ದೇಶವು ಹೇಗೆ ನೀರಿನಲ್ಲಿ ಸ್ವಾವಲಂಬಿಯಾಗಿದೆ ಮತ್ತು ಬೇರೆ ದೇಶಗಳಿಗೆ ನೀರನ್ನು ರಫ್ತು ಮಾಡುವ ಕುರಿತು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ. ಎರಡನೇ ಜಾಗತಿಕ ಯುದ್ಧದ ನಂತರ ವಿಶ್ವದ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ದೇಶಗಳಲ್ಲಿ ಇಸ್ರೇಲ್ ಕೂಡ ಒಂದು. 1948 ಅಸ್ತಿತ್ವಕ್ಕೆ ಬಂದ ಇಸ್ರೇಲ್ ದೇಶವು ಜನ ಸಂಖ್ಯೆ ಹತ್ತು ಪಟ್ಟು ಹೆಚ್ಚಾಗಿದೆ. ಹವಾಮಾನದ ವೈಪರೀತ್ಯದಿಂದ ಮಳೆಯ ಪ್ರಮಾಣವು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ , ಆದರೂ ಇಸ್ರೇಲ್ ದೇಶವು ನೀರನ್ನು ಬೇರೆ ದೇಶಗಳಿಗೆ ರಪ್ತು ಮಾಡುವ ಮೂಲಕ ಹೇಗೆ ಮಾದರಿಯಾಗಿದೆ ಎಂಬುದರ ಮಾಹಿತಿಯನ್ನು ಲೇಖಕರು ಇಲ್ಲಿ ನೀಡಿದ್ದಾರೆ. 1948 ಅಸ್ತಿತ್ವಕ್ಕೆ ಬಂದ ಇಸ್ರೇಲ್ ದೇಶದಲ್ಲಿ 1955ರಲ್ಲಿಯೇ ನಾಗರಿಕರು ಕೊಳವೆ ಬಾವಿ ಕೊರೆಸುವುದನ್ನು ನಿಷೇಧಿಸಲಾಗಿದೆ. ನದಿ, ಕೆರೆ, ಸರೋವರ, ತೊರೆ ಮತ್ತು ಮಳೆ ನೀರೂ ಸಹ ಸರ್ಕಾರಿ ಸೊತ್ತು ಎಂದು ಘೋಷಿಸಿದ್ದು ಸರ್ಕಾರದ ಅಪ್ಪಣೆ ಇಲ್ಲದೆ ಯಾವುದೇ ಕಾರಣಕ್ಕೂ ಯಾರೂ ನೀರನ್ನು ಉಪಯೋಗಿಸುವ ಹಾಗೆ ಇಲ್ಲ ಎಂಬ ಆಜ್ಷೆ ಇದೆ. ಹೀಗೆ ಪ್ರಮುಖ ವಿಷಯಗಳ ಕುರಿತು ಲೇಖಕರು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
©2024 Book Brahma Private Limited.