ನೀರು ಸಂಗ್ರಹಕ್ಕೆ ವಿವಿಧ ಮಾದರಿಗಳು ಈಗಾಗಲೇ ಚಾಲ್ತಿಯಲ್ಲಿವೆ. ಅದರಲ್ಲಿ ಛಾವಣಿ ಮುಗಿಲ ಕೊಯ್ಲು ಕೂಡ ಒಂದು ಬಗೆ. ಈ ಕೃತಿಯಲ್ಲಿ ಛಾವಣಿ ಮುಗಿಲ ಕೊಯ್ಲಿನ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಜಲಚಕ್ರ, ಜಲ ಸಂಪನ್ಮೂಲ - ಸಮೃದ್ಧಿಯ ನಡುವೆ ಬರ, ಸಿಹಿ ನೀರಿನ ಬಳಕೆಯ ಆದ್ಯತೆಗಳು ಹಾಗೂ ವಿವಿಧ ಮೂಲಗಳು, ಮನೆ ಬಳಕೆಗೆ ನೀರಿನ ಅವಶ್ಯಕತೆ ಮಾನವನ ಪ್ರತ್ಯಕ್ಷ ಮತ್ತು ಪರೋಕ್ಷ ಬೇಡಿಕೆಗೆ ಒಟ್ಟು ನೀರಿನ ಬಳಕೆ, ಅಶುದ್ಧ ನೀರಿನ ಬಳಕೆಯಿಂದಾಗುವ ಹಾನಿಗಳು, ಶುದ್ಧ ನೀರು ಪಡೆಯಲು ಆಗುವ ಶ್ರಮ ಮತ್ತು ವೆಚ್ಚ, ನೀರಿನ ಪೂರೈಕೆಗೆ ಜಾಗತಿಕ ಆರೋಗ್ಯ ಸಂಸ್ಥೆಯವರು ನಿಗದಿಪಡಿಸಿರುವ ಮಾನದಂಡಗಳು, ಮನೆ ಬಳಕೆಗೆ ನೀರಿನ ಸೂಕ್ತತೆ, ಛಾವಣಿ ಮಳೆಕೊಯ್ಲು ಯಾವ ಸನ್ನಿವೇಶದಲ್ಲಿ ಸೂಕ್ತ?, ಸಂಗ್ರಹಿಸಲು ಲಭ್ಯವಿರುವ ಮಳೆ ನೀರಿನ ಪ್ರಮಾಣ, ಸಂಗ್ರಹಿಸಬಹುದಾದ ಮಳೆಯ ನೀರಿನ ಪ್ರಮಾಣ, ಛಾವಣಿ ಮಳೆ ನೀರು ಕೊಯ್ಲಿನ ವಿಧಾನ, ಬಳಕೆಯ ಉದ್ದೇಶಕ್ಕನುಗುಣವಾಗಿ ತೊಟ್ಟಿಯ ರಚನೆ, ಒಂದು ಸಾಧಾರಣ ಮನೆಯಲ್ಲಿ ಛಾವಣಿ ಮಳೆಕೊಯ್ಲು ವ್ಯವಸ್ಥೆಯ ಉದಾಹರಣೆ, ಛಾವಣಿ ಮಳೆಕೊಯ್ಲು ನೀರಿನಿಂದ ಅಂತರ್ಜಲ ಮರುಪೂರಣೆಯ ಸಾಧ್ಯತೆಗಳು ಕುರಿತ ಸಂಪೂರ್ಣ ಮಾಹಿತಿ ಈ ಕೃತಿಯಲ್ಲಿದೆ.
©2024 Book Brahma Private Limited.