ಬೀಜ ಬಂಗಾರ ಎಂಬುದು ಲೇಖಕ ಜಿ. ಕೃಷ್ಣಪ್ರಸಾದ್ ಅವರು ರಚಿಸಿದ ಕೃತಿ. ನಾಡ ತಳಿಗಳ ಜಾಡಿನಲ್ಲಿ ಎಂಬುದು ಕೃತಿಗೆ ನೀಡಿರುವ ಉಪಶೀರ್ಷಿಕೆ. ಎಲ್ಲ ಬೀಜಗಳು ಮೊಳಕೆಯೊಡೆಯಲಾರವು. ಬೀಜದ ತಳಿಗಳೆಂದೇ ಕೆಲವು ಬೀಜಗಳು ಇರುತ್ತವೆ. ಫಸಲು ಬಂದ ನಂತರ ಬೀಜಕ್ಕಾಗಿ ಎಂದೇ ರೈತರು ಸರಿಯಾಗಿ ಸಂಸ್ಕರಣೆ ಮಾಡಿ ಈ ಕಾಳು-ಕಡಿಯ ಬೀಜಗಳನ್ನು ಸಂರಕ್ಷಿಸಿಡುತ್ತಾರೆ. ಇಂತಹ ಬೀಜಗಳನ್ನೇ ಬಿತ್ತನೆಗೆ ಉಪಯೋಗಿಸಿದರೆ ಮಾತ್ರ ಅವು ಬೆಳೆದು ಫಸಲು ನೀಡುತ್ತವೆ. ತಪ್ಪಿದರೆ, ಮೊಳಕೆಯಲ್ಲೇ ಕಮರಿ ಹೋಗುತ್ತವೆ. ಇಂತಹ ಪದ್ಧತಿಯು ನಮ್ಮ ಸಾಂಪ್ರದಾಯಿಕ ಕೃಷಿಯಲ್ಲಿದೆ. ಈ ಜ್ಞಾನವು ಇಂದು ಮಸುಕಾಗುತ್ತಿದೆ. ಕಂಪನಿಗಳು ಸಿದ್ಧಪಡಿಸಿದ ಬೀಜಗಳನ್ನೇ ಇಂದಿನ ಕೃಷಿ ಪದ್ಧತಿ ಅವಲಂಬಿಸಿದೆ. ಇದರಿಂದ, ರೈತರಿಗೆ ಮೋಸವಾಗುತ್ತಿದೆ. ಬೀಜಗಳು ಮೊಳಕೆಯೊಡೆಯದೇ ರೈತರು ಹಾನಿ ಅನುಭವಿಸುತ್ತಿರುವುದು ಇಂದು ದುಸ್ಥಿತಿ. ಇಂತಹ ಅಪಾಯಗಳನ್ನು ತಡೆಗಟ್ಟುವ ಉದ್ದೇಶದೊಂದಿಗೆ ಉತ್ತಮ ಬಿತ್ತನೆ ಬೀಜಗಳ ಕುರಿತು ಜ್ಞಾನ ಹರಡುವಿಕೆ ಜೊತೆಗೆ ಬಿತ್ತನೆ ಬೀಜಗಳ ತಳಿಗಳ ಸಾಂಪ್ರದಾಯಿಕ ಜ್ಞಾನದ ಮುಂದುವರಿಕೆಯಾಗಿ ಈ ಕೃತಿಯು ಪೂರಕ ಮಾಹಿತಿ ನೀಡುತ್ತದೆ.
©2024 Book Brahma Private Limited.