ನೆಲ-ಜಲ-ಜನ-ಈ ಕೃತಿಯನ್ನು ರಚಿಸಿದವರು ನೀರಿನ ಗಾಂಧಿ ಎಂದೇ ಖ್ಯಾತಿಯ ಅಯ್ಯಪ್ಪ ಮಸಗಿ ಅವರು. ನೀರಿನ ಸಂರಕ್ಷಣೆ ಕುರಿತು ತಮ್ಮದೇ ಯೋಜನೆಗಳಿಂದ ಪ್ರಸಿದ್ಧ ಪಡೆದ ಅವರು ಭಾರತಾದ್ಯಂತ ನೀರು ಅಭಾವದ ಪ್ರದೇಶಗಳಲ್ಲಿ ನೀರಿನ ಮೂಲವನ್ನು ಹೆಚ್ಚಿಸಿದ್ದಾರೆ. ನೀರಿನ ಮಹತ್ವ, ಅದರ ಸಂರಕ್ಷಣೆ, ಸಹಕಾರ ತತ್ವದಡಿ ನೀರು ಸಂಪತ್ತು ಹೆಚ್ಚಿಸಿಕೊಳ್ಳುವ ಪರಿ ಇತ್ಯಾದಿ ಯೋಚನೆ-ಯೋಜನೆಗಳ ಮಾಹಿತಿ ನೀಡುವ ಕೃತಿ ಇದು.
ಅಂತರ್ಜಲ ನಿರ್ವಹಣೆ, ಮಳೆ ನೀರು ಸಂಗ್ರಹ ಹಾಗೂ ರೈತರ ಸ್ವಾಭಿಮಾನ ಇತ್ಯಾದಿ ಕೆರೆ ಮತ್ತು ಕೊಳವೆಬಾವಿ ಜಲ ಮರು ಪೂರಣ ವ್ಯವಸ್ಥೆಯ ಕುರಿತು ಅರ್ಥಪೂರ್ಣ ಮಾಹಿತಿಯನ್ನು ಈ ಕೃತಿ ಒಳಗೊಂಡಿದೆ.
©2024 Book Brahma Private Limited.