‘ಪ್ರಾಚೀನ ಭಾರತದಲ್ಲಿ ಬೇಸಾಯ’ ಕೃತಿಯು ಸಿ.ಕೆ ಕುಮುದಿನಿ ಅವರ ಸಂಪಾದಿತ ಲೇಖನಗಳ ಸಂಕಲನವಾಗಿದೆ. ಈ ಪುಸ್ತಕದಲ್ಲಿ ಪ್ರಾಚೀನ ಕಾಲದ ಕೃಷಿ ಪದ್ಧತಿಯಲ್ಲಿ ಭೂಮಿ ವಿಂಗಡಣೆ, ನೀರಾವರಿ ಮತ್ತು ಬಸಿಯುವಿಕೆ, ಉಳುಮೆ ಮತ್ತು ಸಲಕರಣೆಗಳು, ಗೊಬ್ಬರ ಯೋಗ, ಬೆಳೆಗಳ ಬೇಸಾಯ, ಬೆಳೆ ಸರದಿ, ರೋಗ ಮತ್ತು ಪೀಡೆಗಳಿಂದ ಬೆಳೆಸಂರಕ್ಷಣೆ, ಬೀಜಬಿತ್ತನೆ, ಕೃಷಿ ಪವನಶಾಸ್ತ್ರ, ಜಾನುವಾರುಗಳು, ಅವುಗಳ ಆರೈಕೆ, ಸಂರಕ್ಷಣೆ, ಪ್ರಾಣಿಜನ್ಯ ಆಹಾರ ಬಳಕೆ ಹಾಗೂ ದನಗಳ ವೈದ್ಯಕೀಯ ಚಿಕಿತ್ಸೆ ಕುರಿತು ವಿವರಗಳಿವೆ. ಈ ಕೃತಿಯಲ್ಲಿ ಆಧಾರವಾಗಿ ಬಳಸಿದ ಗ್ರಂಥಗಳಿಂದ ಕೃಷಿ ಮತ್ತು ಪಶುಸಂಗೋಪನೆಗಳಲ್ಲದೆ, ಅರಣ್ಯಶಾಸ್ತ್ರದಲ್ಲಿಯೂ ಜನ ಪರಿಣಿತರಾಗಿದ್ದು ತಿಳಿದುಬರುತ್ತದೆ. ಹಿಂದೂಧರ್ಮದಲ್ಲಿ ಮರಗಳನ್ನು ನೆಡುವಿಕೆ ಮತ್ತು ಪಾಲನೆ ಪ್ರಧಾನ ತತ್ವಗಳಾಗಿವೆ. ಏಕೆಂದರೆ, ಭಾರತೀಯ ಸಂಸ್ಕೃತಿಯು ತನ್ನ ಹುಟ್ಟಿನಿಂದಲೇ ಋಷಿಮುನಿಗಳು ವಾಸಿಸುತ್ತಿದ್ದ ಮರಗಳ ನೆರಳಿನಲ್ಲಿಯೇ ಬೆಳೆದು ಬಂದಿದೆ. ಈ ಕೃತಿಯಲ್ಲಿ ವಿವಿಧ ಬಗೆಯ ಮರಗಳು, ಬದುಕಿನಲ್ಲಿ ಅವುಗಳ ಪ್ರಾಮುಖ್ಯತೆ, ಉಪಯುಕ್ತತೆ ಇತ್ಯಾದಿ ಅಂಶಗಳು ಒಳಗೊಂಡಿವೆ.
©2024 Book Brahma Private Limited.