ಭಗೀರಥ

Author : ಅಯ್ಯಪ್ಪ ಮಸಗಿ

Pages 364

₹ 180.00




Year of Publication: 2016
Published by: ಜಲ ಸಿರಿ ಜಲ ವೃದ್ಧಿ ಪ್ರಕಾಶನ
Address: ಗದಗ

Synopsys

ಭಗೀರಥ-ಈ ಕೃತಿಯ ಲೇಖಕರು: ಅಯ್ಯಪ್ಪ ಮಸಗಿ. ನೀರಿನ ಸಮಸ್ಯೆಯ ವಿರುದ್ಧ ಸಮರ ಎಂಬ ಉಪ ಶೀರ್ಷಿಕೆಯಡಿ ಕೃತಿ ರಚಿಸಿದ್ದಾರೆ. ನೀರಿನ ಅಭಾವವನ್ನು ನೀಗಿಸುವ ಹಾಗೂ ನೀರಿನ ಮಹತ್ವ -ಸಂಗ್ರಹ ಕುರಿತು ಮಾಹಿತಿ ನೀಡುವುದು ಕೃತಿಯ ಉದ್ದೇಶವಾಗಿದೆ. ಹೊಲಗಳಲ್ಲಿ ನೀರು ನಿಲ್ಲಿಸುವ ವಿಧಾನ, ನಂತರ ಅದನ್ನು ಬಳಸುವ ರೀತಿ, ಮಳೆ ನೀರು ಸಂಗ್ರಹದ ಪರಿ ಇತ್ಯಾದಿ ವಿಷಯಗಳೊಂದಿಗೆ ಕೃಷಿಯಲ್ಲಿ ನೀರಿನ ಮಿತ ಬಳಕೆ ಕುರಿತು ಸವಿವರ ಮಾಹಿತಿ ನೀಡುವ ಕೃತಿ ಇದು.

About the Author

ಅಯ್ಯಪ್ಪ ಮಸಗಿ
(01 June 1957)

ನೀರಿನ ಗಾಂಧಿ ಎಂದೇ ಖ್ಯಾತಿಯ ಲೇಖಕ ಅಯ್ಯಪ್ಪ ಮಸಗಿ ಅವರು ಮೂಲತಃ ಗದಗ ಜಿಲ್ಲೆಯ ನಾಗರಾಳ ಗ್ರಾಮದವರು. ನೀರು ಸಾಕ್ಷರತಾ ಪ್ರತಿಷ್ಠಾನ ಸ್ಥಾಪಕ ಅಧ್ಯಕ್ಷರು. ಭಾರತದಾದ್ಯಂತ ವಿವಿಧ ಗ್ರಾಮಗಳಲ್ಲಿ ನೀರಿನ ಸಂರಕ್ಷಣೆ ಕುರಿತು ಮಾಹಿತಿ ನೀಡಿ ಮರುಭೂಮಿಯಂತಹ ಪ್ರದೇಶದಲ್ಲಿ ನೀರಿನ ಅಭಾವ ನೀಗಿಸಿದ್ದಾರೆ. ಸುಮಾರು 200 ೨೦೦ ಕೋಟಿ ರೂ. ಮೌಲ್ಯದಷ್ಟು ಯೋಜನೆಗಳನ್ನು ಪೂರ್ಣಗೊಳಿಸಿ, 6777 ಕೋಟಿ ಲೀಟರ್ ನೀರನ್ನು ಇಂಗಿಸಿ, ಅದರಿಂದ 40,000 ದಷ್ಟು ಗಿಡಮರಗಳನ್ನು ಬೆಳೆಸಿದ ಕೀರ್ತಿ ಇವರಿಗಿದೆ. ಭಾರತದಲ್ಲಿ ಅತಿ ಹೆಚ್ಚು ಕೆರೆಗಳ ನಿರ್ಮಾಣ ಮತ್ತು ಕೊಳವೆ ಬಾವಿ ಮರುಪೂರಣ ದಾಖಲೆಗಾಗಿ 2012 ...

READ MORE

Related Books