ಜಪಾನಿ ಕೃಷಿತಜ್ಞ ಫುಕುಕಾನನ್ನು ಪರಿಚಯಿಸುವ ಕೃತಿ ’ಸಹಜ ಕೃಷಿ’ (1992) ಫುಕುಕಾ ತನ್ನ ಜೀವನದುದ್ದಕ್ಕೂ ಕೃಷಿಯಲ್ಲಿ ಅನೇಕ ಪ್ರಯೋಗ ನಡೆಸಿದ್ದ. ತನ್ನ ಸಹಜ ಬೇಸಾಯ ಪದ್ಧತಿಗೆ ಈತ ನಾಲ್ಕು ಮೂಲತತ್ತ್ವಗಳನ್ನು ಮಂಡಿಸಿದ, ನೆಲವನ್ನು ಉಳದ ಬೀಜಗಳನ್ನು ಬಿತ್ತಬೇಕು. ಯಾವುದೇ ರಾಸಾಯನಿಕ ಗೊಬ್ಬರ ಬಳಸಬಾರದು, ಕಳೆ ಕೀಳಬಾರದು, ಕ್ರಿಮಿನಾಶಕಗಳ ಸಿಂಪಡಣೆಯನ್ನು ನಿಲ್ಲಿಸಬೇಕು ಎಂದ. ಆಧುನಿಕ-ದುಬಾರಿ ಬೇಸಾಯ ಪದ್ದತಿಗಳಿಂದ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪಿರುವ ರೈತರಿಗೂ ಮತ್ತು ಸತ್ವ ಕಳೆದುಕೊಂಡಿರುವ ನೆಲಕ್ಕೂ ಪುಕೋಕಾನ ಚಿಂತನೆಗಳು ಈಗ ಮರುಜೀವ ನೀಡಬಲ್ಲವು. ಆತನ ವಿಚಾರಗಳ ಮೂಲಕ ತೇಜಸ್ವಿ ಕನ್ನಡಿಗರಿಗೆ ಇಲ್ಲಿ ಸಹಜಕೃಷಿ ಪದ್ಧತಿ ಪರಿಚಯಿಸಿದ್ದಾರೆ. 'ಸಹಜ ಕೃಷಿ” ಏಳು ಮುದ್ರಣ ಕಂಡಿದೆ.
©2025 Book Brahma Private Limited.