‘ಭೂಸಾರ ಸಂರಕ್ಷಣೆ’ ಕೃತಿಯು ವಿರೂಪಾಕ್ಷ ಬಡಿಗೇರ ಅವರ ಕೃಷಿಯ ಕುರಿತ ಬರಹಗಳ ಸಂಕಲನವಾಗಿದೆ. ಕೃತಿಯ ಕುರಿತು ವಿಶ್ಲೇಷಣೆ ಮಾಡಿರುವ ವೀ.ಚ ಹಿತ್ತಲಮನಿ ಅವರು, ಮಣ್ಣು ಪ್ರಕೃತಿಯ ಅಮೂಲ್ಯ ಸಂಪತ್ತು ಹಾಗೂ ವ್ಯವಸಾಯಕ್ಕೆ ಮೂಲ ಆಧಾರ ವಸ್ತು. ಸಸ್ಯ, ಪ್ರಾಣಿ ಹಾಗೂ ಮಾನವರಿಗೆ ಅಗತ್ಯವಾಗಿರುವ ಆಹಾರ, ವಸತಿ, ಉಡುಗೆಗಳನ್ನು ಒದಗಿಸುವಿಕೆಯಲ್ಲಿಯೂ ಮಹತ್ವದ ಪಾತ್ರವಹಿಸಿದೆ. ಮಣ್ಣು ನಿರ್ಮಾಣವಾಗಲು ಅಸಂಖ್ಯಾತ ವರ್ಷಗಳೇ ಬೇಕು. ಮಣ್ಣಿನ ಫಲವತ್ತತೆ ಹೆಚ್ಚಿಸಿ ಸಾರ ನಷ್ವವಾಗದಂತೆ ಕೈಗೊಳ್ಳುವ ಕಾರ್ಯ ಬೆಳೆ ಉತ್ಪಾದನೆಗೆ ಬಹಳ ಸಹಕಾರಿ. ಮಣ್ಣನ್ನು ಕಾಪಾಡದೆ ಅದರ ಸಾರ ನಷ್ಟಗೊಳ್ಳುವುದಕ್ಕೆ ಬಿಟ್ಟರೆ ಅದನ್ನು ಅವಲಂಬಿಸಿದ ರೈತರಿಗೂ ಇತರ ಮಾನವರಿಗೂ ಜೀವನಾಧಾರ ಕಷ್ಟವಾಗುತ್ತದೆ. ಈ ಕಿರು ಹೊತ್ತಗೆಯಲ್ಲಿ ಮಣ್ಣು, ನೀರು, ಭೂಸವಕಳಿ, ಭೂಸಾರ ಸಂರಕ್ಷಣೆ, ಸಮಪಾತಳಿ ಬದುಗಳು, ಹೊಳೆಗಟ್ಟಿಗಳು ಹಾಗೂ ಭೂಫಲವತ್ತತೆ ಈ ಕೆಲವು ಸಂಗತಿಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ.
©2025 Book Brahma Private Limited.