ರೈತ, ದೇಶದ ಬೆನ್ನೆಲುಬು ಎಂದು ಹೇಳುತ್ತೇವೆ. ಆದರೆ, ರೈತನ ಬೆನ್ನೆಲುಬು ಕಾರ್ಪೋರೇಟ್ ಹಿಡಿತಕ್ಕೆ ಸಿಕ್ಕು ನಲುಗುತ್ತಿರುವ ಬಗೆಯನ್ನು ಈ ಕೃತಿಯಲ್ಲಿ ತಮ್ಮದೇ ವಿಶಿಷ್ಟ ವಿಧಾನದ ಮೂಲಕ ಚಿತ್ರಿಸಿದ್ಧಾರೆ ಲೇಖಕರು.
ಕೃಷಿಗೆ ಹೈಬ್ರಿಡ್ ಬೀಜ, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಕೃಷಿ ಪರಿಕರಗಳ ಮೂಲಕ ಅವರನ್ನು ಅವಲಂಬಿತರನ್ನಾಗಿಸುತ್ತ, ತಮ್ಮ ಲಾಭದೆಡೆಗೆ ಲಾಭಿ ಮಾಡುವವರ ಹಾಗೂ ಜಾನಪದ ಕೃಷಿ ಪದ್ಧತಿಯನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ಬೆಳಕು ಚೆಲ್ಲಿದ್ಧಾರೆ. ಇವುಗಳಿಗೆಲ್ಲ ಪರಿಹಾರವೆಂಬಂತೆ ಜನಪದ ಕೃಷಿ ಪದ್ಧತಿಯಲ್ಲಿರುವ, “ಚರಗ' ಮತ್ತು 'ದೀಪೋಳಿಗೆ' ಆಚರಣೆಗಳಲ್ಲಿರುವ ಸಮಗ್ರ ಕೀಟ ನಿರ್ವಹಣೆಯ ವಿಧಾನಗಳನ್ನು ಲೇಖನಗಳ ಮೂಲಕ ಕಟ್ಟಿಕೊಡಲಾಗಿದೆ.
©2024 Book Brahma Private Limited.