ಭಾರತ ಕೃಷಿ ಪ್ರಧಾನ ದೇಶ. ಕೃಷಿಯನ್ನು ಕಾಲಕಾಲಕ್ಕೆ ಉನ್ನತೀಕರಿಸಲು ಬೇಕಾದ ವೈಜ್ಞಾನಿಕ ಅರಿವನ್ನು ರೈತರಿಗೆ ಸರಿಯಾಗಿ ಸಿಗುತ್ತಿರಲಿಲ್ಲ. ಆದರೆ ಇಂದಿನ ಕೃಷಿ ಅಭಿವೃದ್ಧಿ ಹೊಂದಿದ್ದು, ರೈತರು ಹೆಚ್ಚುವರಿ ಇಳುವರಿ ಹಿಂದೆ ಬಿದ್ದಿದ್ದಾರೆ. ಇಂತಹ ವಾಸ್ತವ ಪರಿಸ್ಥಿತಿಯಲ್ಲಿ ಕೃಷಿಯ ವೈಜ್ಞಾನಿಕತೆ ಬಗ್ಗೆ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಅರಿವು ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ, ಎಂ. ಮಹದೇವಪ್ಪನವರ ವೈಜ್ಞಾನಿಕ ಕೃಷಿ ಕೃತಿಯು ಸಹಕಾರಿ ಯಾಗಬಲ್ಲದು. ಇದರಲ್ಲಿ ಕೃಷಿ, ನೈಸರ್ಗಿಕ ಸಂಪನ್ಮೂಲಗಳು, ಬೀಜಗಳು, ಕಳೆಗಳು, ಕೃಷಿ ಸಂಬಂಧಿತ ಸಂಗತಿಗಳ ಕುರಿತು ತಳಸ್ಪರ್ಶಿ ಅಧ್ಯಯನದಿಂದ ಬರೆದಿರುವ ಲೇಖನಗಳು ಸಂಶೋಧನಾ ನಿರತರಿಗೆ ಆಕರ ಸಾಮಗ್ರಿ ಎಂತಲೂ ಆಗಿದೆ.
©2024 Book Brahma Private Limited.