ಕೃಷಿ-ಗ್ರಾಮೀಣ ಪತ್ರಿಕೋದ್ಯಮ

Author : ಶಿವರಾಂ ಪೈಲೂರು

Pages 100

₹ 120.00




Published by: ಕೃಷಿ ಮಾಧ್ಯಮ ಕೇಂದ್ರ
Phone: 9483757707

Synopsys

ಕೃಷಿ ಮತ್ತು ಗ್ರಾಮೀಣ ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರಿಗೆ ಇದು ಉಪಯುಕ್ತವಾದ ಕೃತಿಯಾಗಿದೆ.  ರೈತರು, ಕೃಷಿ ಮತ್ತು ಗ್ರಾಮ್ಯ ಜೀವನದ ತಳಮಟ್ಟದ ಕ್ಷೇತ್ರ ಅಧ್ಯಯನವನ್ನು ಈ ಕೃತಿ ವಿವರಿಸುತ್ತದೆ. ನುಡಿಚಿತ್ರಕ್ಕಾಗಿ ಕ್ಷೇತ್ರಭೇಟಿ, ಪೂರ್ವಸಿದ್ಧತೆ ಹೇಗಿರಬೇಕು? ಬರವಣಿಗೆಯ ಹೂರಣದಲ್ಲಿ ಏನಿರಬೇಕೆಂಬ ಸಕಲ ಮಾಹಿತಿಯನ್ನೂ ಒದಗಿಸುತ್ತದೆ.  ಕೃಷಿ ಪತ್ರಿಕೋದ್ಯಮದ ಕುರಿತ ಮಾದರಿ ಕೃತಿ ಇದಾಗಿದ್ದು, ಕೃಷಿ ಕುರಿತು ಲೇಖನ ಬರೆಯುವ ಆಸಕ್ತರಿಗೆ ಸ್ಫೂರ್ತಿ ತುಂಬುವಂತಹ ವಿಷಯಗಳನ್ನು ಒಳಗೊಂಡಿದೆ.

About the Author

ಶಿವರಾಂ ಪೈಲೂರು

ಶಿವರಾಂ ಪೈಲೂರು ದಕ್ಷಿಣ ಕನ್ನಡ ಜಿಲ್ಲೆಯ ಚೊಕ್ಕಾಡಿಯವರು. ಕೃಷಿ ಕುಟುಂಬದವರಾದ ಇವರು ಪತ್ರಿಕೋದ್ಯಮದಲ್ಲಿ ಎಂ.ಎ, ಮತ್ತು ಕೃಷಿ ಸಂವಹನದಲ್ಲಿ ಡಾಕ್ಟರೇಟ್ ಪದವಿ ಗಳಿಸಿದ್ದಾರೆ. ೧೯೮೮ ರಲ್ಲಿ ಮಣಿಪಾಲದ ’ತರಂಗ’ ವಾರಪತ್ರಿಕೆಯಲ್ಲಿ ಉಪಸಂಪಾದಕರಾಗಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು, ಬಳಿಕ ಕೊಚ್ಚಿನ್ ನ ಸಂಬಾರ ಮಂಡಳಿಯಲ್ಲಿ ಉದ್ಯೋಗವನ್ನು ಕೈಗೊಂಡರು. ಸ್ಪೈಸ್ ಇಂಡಿಯಾ ಕನ್ನಡ ಮಾಸಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಂಡರು. ೧೯೯೧ ರಲ್ಲಿ ಕೇಂದ್ರ ಸರ್ಕಾರದ ಭಾರತೀಯ ಸಮಾಚಾರ ಸೇವೆಗೆ ಸೇರ್ಪಡೆಯಾದರು. ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಆಕಾಶವಾಣಿ, ದೂರದರ್ಶನ ವಿವಿಧ ಹುದ್ದೆಗಳಲ್ಲಿ ಮಂಗಳೂರು, ಧಾರವಾಡ, ದೆಹಲಿ ಮತ್ತು ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಪರಿಸರ ...

READ MORE

Related Books