ಹನಿ ನೀರಾವರಿ, ವ್ಯವಸ್ಥಿತ ಕೃಷಿಗೆ ದಾರಿ

Author : ಎ.ಎಸ್. ಕುಮಾರಸ್ವಾಮಿ

Pages 118

₹ 80.00




Year of Publication: 1995
Published by: ಕೃಷಿ ಕಿರಣ
Address: ಶಿವಮೊಗ್ಗ

Synopsys

’ನೀರಿನ ಮಿತ ಬಳಕೆ ಎಲ್ಲರ ಹೊಣೆ’ ಎನ್ನುವ ಲೇಖಕರು ಕೃಷಿಯಲ್ಲಿ ಹನಿ ನೀರಾವರಿ ಬಳಕೆ ಎಷ್ಟು ಪರಿಣಾಮಕಾರಿಯಾಗಿರುತ್ತದೆ ಎಂಬುದನ್ನು ಕೃತಿಯಲ್ಲಿ ವಿವರಿಸಿದ್ದಾರೆ. ಹನಿ ನೀರಾವರಿ ಎಂದರೇನು? ಕೃಷಿಯಲ್ಲಿ ಹನಿ ನೀರಾವರಿ ವ್ಯವಸ್ಥೆಯಿಂದಾಗುವ ಉಪಯೋಗಗಳೇನು? ಕಡಿಮೆ ನೀರಿನ ಬಳಕೆಯ ಮೂಲಕ ಉತ್ತಮ ಫಲ ಪಡೆಯುವುದು ಹೇಗೆ? ಮುಂತಾದ ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ಈ ಕೃತಿಯಲ್ಲಿದೆ. ಹನಿ ನೀರಾವರಿ ಮಾಡಲು ಯೋಚಿಸುವ ಕೃಷಿಕರಿಗೆ ಇದು ಮಾರ್ಗದರ್ಶಿ ಕೈಪಿಡಿಯಾಗಬಲ್ಲದು.

About the Author

ಎ.ಎಸ್. ಕುಮಾರಸ್ವಾಮಿ
(20 January 1953)

ಲೇಖಕ, ಕೃಷಿ ವಿಜ್ಞಾನಿ ಡಾ.ಎ.ಎಸ್. ಕುಮಾರಸ್ವಾಮಿ (ಅಬ್ಬಿಗೆರೆ ಶಿವಲಿಂಗಪ್ಪ ಕುಮಾರಸ್ವಾಮಿ) ಜನಿಸಿದ್ದು 1953 ಜನವರಿ 20 ರಂದು. ದಾವಣಗೆರೆ ಜಿಲ್ಲೆ ದೊಡ್ಡಬ್ಬೀಗೆರೆ ಗ್ರಾಮದವರು. ಸಂತೇಬೆನ್ನೂರಿನಲ್ಲಿ ಎಸ್‌ಎಸ್‌ಎಲ್‌ಸಿ ವರೆಗೂ ಶಿಕ್ಷಣ ಪಡೆದು, ಧಾರವಾಡ ಹಾಗೂ ಬೆಂಗಳೂರಿನಲ್ಲಿ ಕೃಷಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪಡೆದಿದ್ದಾರೆ. ಬೆಂಗಳೂರಿನ ಕೃಷಿ ಮಹಾವಿದ್ಯಾಲಯದಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿ, ಪ್ರಾಧ್ಯಾಪಕರಾಗಿ, ವಲಯ ಕೃಷಿ ಸಂಶೋಧನ ಕೇಂದ್ರದಲ್ಲಿ ತಂಬಾಕು ಬೆಳೆ ಬೇಸಾಯ ಶಾಸ್ತ್ರಜ್ಞರಾಗಿ, ಹಾಸನ ಕೃಷಿ ಕಾಲೇಜು ಸ್ಥಾಪಕ ನಿರ್ದೇಶಕರು ಹಾಗೂ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಹ ಸಂಶೋಧನಾ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ತಮ್ಮ ಅನುಭವ, ...

READ MORE

Related Books