ಹಿರಿಯ ಪತ್ರಕರ್ತ ನಾ.ಕಾರಂತ ಪೆರಾಜೆಯವರು ರೂಪಿಸಿದ ಕೃತಿ ‘ಅನ್ನದ ಮರ’. ಹಲಸು ಈಗ ಜಗದಗಲ ಎಂಬ ಉಪಶೀರ್ಷಿಕೆಯನ್ನು ಈ ಕೃತಿ ಹೊಂದಿದೆ. 'ಅನ್ನದ ಮರ' ಪುಸ್ತಕ ಹಲಸಿನ ವೈವಿಧ್ಯಮಯ ಸಾಧ್ಯತೆಗಳನ್ನು ಬಿಚ್ಚಿಡುತ್ತದೆ. ಪ್ರಸ್ತುತ ದಿನಗಳಲ್ಲಿ ಹಲಸು ಹೇಗೆ ಉದ್ಯಮವಾಗಿ ಬೆಳೆದುಬರುತ್ತಿದೆ ಎಂಬ ಚಿತ್ರಣವೂ ಇದೆ. ಭವಿಷ್ಯದಲ್ಲಿ ಉದ್ಯಮಕ್ಕೆ ಅಡಿಯಿಡಬೇಕೆಂಬ ಉತ್ಸಾಹ ಇದ್ದವರಿಗೆ 'ಹಲಸೂ ಒಂದು ಸಾಧ್ಯತೆ' ಎಂಬಷ್ಟರ ಮಟ್ಟಿಗೆ ಭರವಸೆಯನ್ನೂ ಈ ಕೃತಿ ನೀಡಬಲ್ಲುದು.
ಹಲಸು ಇಂದು ಕೃಷಿಯಾಗಿ ಬದಲಾಗಿ ಬೆಳೆದವನಿಗೆ ಅನ್ನದ ದಾರಿ ತೋರುವ ಬೆಳೆಯೆನಿಸಿಕೊಳ್ಳುತ್ತಿದೆ. ಹಾಗಾಗಿ ಅದು ಈಗೀಗ ಅನ್ನದ ಮರವಾಗಿ ಪರಿವರ್ತನೆಗೊಳ್ಳುತ್ತಿರುವುದು ಸತ್ಯ. ಆದರೆ ಎಲ್ಲೋ ಮೂಲೆಯಲ್ಲಿ ಬಿದ್ದುಕೊಂಡಿದ್ದ ಈ ಹಲಸಿಗೆ ಪೋಷಿಸಿ 'ಅನ್ನದ ಮರ' ವಾಗಿ ಬೆಳೆಸಿ, ನೂತನ ಸಾಧ್ಯತೆಗಳ ಬಗ್ಗೆ ಚರ್ಚಿಸಲಾದ ಅನೇಕ ಮಾಹಿತಿಗಳನ್ನು ಈ ಕೃತಿ ಅನಾವರಣಗೊಳಿಸಿದೆ. ಅಡ್ಡೂರು ಕರಷ್ಣ ರಾವ್ ಅವರು ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ.
ಕೃತಿಯ ಪರಿವಿಡಿಯಲ್ಲಿ ಹಲಸಿಗೆ ‘ರಾಯಭಾರಿ’ ಯೋಗ, ದೇವರ ನಾಡಿನಲ್ಲಿ ಹಲಸಿಗೆ ರಾಜಕಿರೀಟ, ಅನಾಥ ಹಣ್ಣಿನ ಮಾನ ವರ್ಧಿಸಿದ ಉಪಕುಲಪತಿ, ದೇಶದಲ್ಲೇ ಪ್ರಥಮ ಈ ಚಕ್ಕವಂಡಿ!, ಅಸೀಸ್ ಯುವಕರನ್ನು ಸೆಳೆದ ‘ಹಲಸಿನ ಪೋಲು’, ಹಲಸಿನ ಸಸ್ಯ ಮಾಂಸ, ಚೇಳೂರು ಹಲಸು ಸಂತೆ, ಹಲಸು- ಹುಮ್ಮಸ್ಸು, ಹಬೀ ಹುಡಿ, ಹಲಸಿನಂಗಡಿ ಸೇರಿದಂತೆ ಅನೇಕ ಶೀರ್ಷಿಕೆಗಳ ಬರಹಗಳಿವೆ.
©2024 Book Brahma Private Limited.